ADVERTISEMENT

ಜನರ ಆಧಾರ್‌ ಕಾರ್ಡ್‌ ನಿಷ್ಕ್ರಿಯ: ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

ಪಿಟಿಐ
Published 19 ಫೆಬ್ರುವರಿ 2024, 14:32 IST
Last Updated 19 ಫೆಬ್ರುವರಿ 2024, 14:32 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಜನರ ಆಧಾರ್‌ ಕಾರ್ಡ್‌ಗಳನ್ನು ‘ಏಕಾಏಕಿ ನಿಷ್ಕ್ರಿಯ’ಗೊಳಿಸಲಾಗಿದೆ. ಇದಕ್ಕೆ ಕಾರಣ ತಿಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಹೀಗೇ ಏಕಾಏಕಿ ನಿಷ್ಕ್ರಿಯಗೊಳಿಸಿರುವ ಕ್ರಮದಿಂದಾಗಿ ರಾಜ್ಯದ ಜನರಲ್ಲಿ ತೀವ್ರ ಆತಂಕ, ಗೊಂದಲ ಉಂಟಾಗಿದೆ. ಈ ಕ್ರಮವು ನಿಯಮಬಾಹಿರ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದಾಗಿದೆ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ADVERTISEMENT

‘ಜನರ ಆಧಾರ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಈ ಬೆಳವಣಿಗೆಯು ಗಂಭೀರ ಸ್ವರೂಪದ ಮುಖ್ಯವಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಜನರಿಗೆ ಮಾಡುತ್ತಿರುವ ತಾರತಮ್ಯವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಸಕಾರಣ ನೀಡದೇ ಹೀಗೆ ನಿಷ್ಕ್ರಿಯಗೊಳಿಸಿರುವ ಉದ್ದೇಶ ಇಳಿಯಲು ಬಯಸುತ್ತೇನೆ. ಲೋಕಸಭೆ ಚುನಾವಣೆಗೂ ಮೊದಲು ಜನರಲ್ಲಿ ಆತಂಕದ ಮನೋಭಾವ ಸೃಷ್ಟಿಸುವ ಉದ್ದೇಶವನ್ನು ಇದು ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡುವುದರ ಪೂರ್ವಭಾವಿಯಾಗಿ ಆಧಾರ್‌ ಕಾರ್ಡ್‌ಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದೂ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.