ಭದೋಹಿ, ಉತ್ತರಪ್ರದೇಶ (ಪಿಟಿಐ): 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ 22 ವರ್ಷದ ಯುವಕನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಸಜೆ ಮತ್ತು ₹33,000 ದಂಡ ವಿಧಿಸಿದೆ.
ಫೋಕ್ಸೊ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಮಧು ಡೋಗ್ರಾ ಅವರು ದಂಡದ ಮೊತ್ತದಲ್ಲಿ ₹ 25 ಸಾವಿರ ಹಣವನ್ನು ಬಾಲಕಿಗೆ ಕೊಡಬೇಕು ಎಂದು ಶನಿವಾರ ಆದೇಶಿದರು.
2022ರ ಏಪ್ರಿಲ್ 29 ರಂದು ಗೋಪಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿತ್ತು. ಅಪರಾಧಿ ಅಜಯ್‌ಕುಮಾರ್ ಯಾದವ್, 8ನೇ ತರಗತಿಯ ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.