ADVERTISEMENT

ಸ್ಫೋಟಕ ಅಕ್ರಮ ದಾಸ್ತಾನು: ಆರೋಪಿ ಬಂಧನ

ಪಿಟಿಐ
Published 30 ಮೇ 2023, 20:13 IST
Last Updated 30 ಮೇ 2023, 20:13 IST
ರುವಾಂಡದಲ್ಲಿ ಹಕ್ಕಿಪಿಕ್ಕಿ ಜನರ ಬಂಧನ?
ರುವಾಂಡದಲ್ಲಿ ಹಕ್ಕಿಪಿಕ್ಕಿ ಜನರ ಬಂಧನ?   

ಕಾಸರಗೋಡು (ಕೇರಳ): ಅಪಾರ ಸ್ಫೋಟಕಗಳನ್ನು ಅಕ್ರಮವಾಗಿ ಹೊಂದಿದ್ದ ಕಾಸರಗೋಡಿನ ವ್ಯಕ್ತಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯು ತನ್ನ ಮನೆಯಲ್ಲಿ ದಾಸ್ತಾನು ಮಾಡಿದ್ದ 2,800 ಜಿಲೆಟಿನ್‌ ಕಡ್ಡಿಗಳು ಮತ್ತು 6,800 ಡಿಟೊನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಧೂರ್‌ ಗ್ರಾಮದ ಮುಹಮ್ಮದ್‌ ಮುಸ್ತಾಫಾ (42) ಬಂಧಿತ ಆರೋಪಿ. ಜಿಲ್ಲಾ ಅಬಕಾರಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಬಕಾರಿ ತಂಡವು, ಆರೋಪಿಯು ಕಳ್ಳಭಟ್ಟಿ ದಾಸ್ತಾನು ಇಟ್ಟಿರುವ ಶಂಕೆಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆರೋಪಿಯ ಮನೆ ಮತ್ತು ಕಾರಿನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದರಿಂದ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

ಸ್ಫೋಟಕಗಳನ್ನು ವಶಪಡಿಸಿಕೊಂಡಾಗ, ಮುಸ್ತಫಾ ತನ್ನ ಮಣಿಕಟ್ಟು ಕತ್ತರಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ತಕ್ಷಣ ಆತನನ್ನು ತಡೆದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.