ADVERTISEMENT

ರಾಕೇಶ್ ಟಿಕಾಯತ್‌ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಪಿಟಿಐ
Published 11 ಮಾರ್ಚ್ 2023, 13:39 IST
Last Updated 11 ಮಾರ್ಚ್ 2023, 13:39 IST
.
.   

ಮುಜಾಫ್ಫರನಗರ (ಉತ್ತರ ಪ್ರದೇಶ): ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮತ್ತು ಅವರ ಕುಟುಂಬವನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೆ ಮಾಡಿದ್ದ ಆರೋಪಿ ದೇವಸಿಂಗ್ ಅವರ ಮಗ ವಿಶಾಲ್ ಎಂದು ಗುರುತಿಸಲಾಗಿದೆ. ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಭೌರಾ ಕಲಾನ್‌ ಪೊಲೀಸ್‌ ಠಾಣಾಧಿಕಾರಿ ಅಕ್ಷಯ್‌ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರೆ ಮಾಡಿರುವ ಸ್ಥಳವನ್ನು ದೆಹಲಿಯಲ್ಲಿ ಗುರುತಿಸಲಾಗಿದ್ದು, ಮುಜಾಫ್ಫರನಗರ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.

ADVERTISEMENT

ರೈತರ ಪ್ರತಿಭಟನೆಗಳಿಂದ ದೂರ ಉಳಿಯದಿದ್ದರೆ ರಾಕೇಶ್ ಟಿಕಾಯತ್ ಮತ್ತು ಅವರ ಕುಟುಂಬವನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಕುರಿತು ರಾಕೇಶ್‌ ಟಿಕಾಯತ್‌ ಅವರ ಸಹೋದರ, ಬಿಕೆಯು ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರ ಮಗ ಗೌರವ್‌ ಟಿಕಾಯತ್‌ ಅವರು ಶುಕ್ರವಾರ ದೂರು ದಾಖಲಿಸಿದ್ದರು.

ಈ ಕುರಿತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 507 ಮತ್ತು 506 ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.