ADVERTISEMENT

ಒಡಿಶಾದ ಸಂಬಾಲ್ಪುರ ಪ್ರಾಣಿ ಸಂಗ್ರಹಾಲಯ: ನರಭಕ್ಷಕ ಚಿರತೆ ವೀಕ್ಷಣೆಗೆ ಅವಕಾಶ

ಪಿಟಿಐ
Published 1 ಅಕ್ಟೋಬರ್ 2024, 14:11 IST
Last Updated 1 ಅಕ್ಟೋಬರ್ 2024, 14:11 IST
<div class="paragraphs"><p>ಚಿರತೆ (ಸಾಂದರ್ಭಿಕ ಚಿತ್ರ0</p></div>

ಚಿರತೆ (ಸಾಂದರ್ಭಿಕ ಚಿತ್ರ0

   

ಸಂಬಾಲ್ಪುರ: ಇಬ್ಬರನ್ನು ಕೊಂದಿದ್ದ ಗಂಡು ಚಿರತೆಯನ್ನು ಸೆರೆ ಹಿಡಿದ ಒಂದು ವರ್ಷದ ನಂತರ ಸಂಬಾಲ್ಪುರ ಪ್ರಾಣಿ ಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಅರಣ್ಯ ಇಲಾಖೆ ಹೇಳಿದೆ.

8 ವರ್ಷದ ಈ ಚಿರತೆಯನ್ನು 2023ರಲ್ಲಿ ಸೆರೆ ಹಿಡಿಯಲಾಗಿತ್ತು. ನಂತರ ಇದನ್ನು ಸಂಬಾಲ್ಪುರದಲ್ಲಿರುವ ರಕ್ಷಣಾ ಕೇಂದ್ರಕ್ಕೆ ತರಲಾಗಿತ್ತು. ಇದೀಗ ಈ ಚಿರತೆಯನ್ನು ಬೃಹತ್‌ ಗಾಜಿನ ಗೋಡೆ ಇರುವ ತಾಣದಲ್ಲಿ ಇಡಲಾಗಿದೆ. ವೀಕ್ಷಣೆಗೆ ಅವಕಾಶವಾಗುವಂತೆ ಪ್ರಾಣಿ ಸಂಗ್ರಹಾಲಯದಲ್ಲಿ ಬಿಡಲಾಗಿದೆ ಎಂದು ಡಿಎಫ್‌ಒ ಅನ್ಶು ಪ್ರಜ್ಞಾನ್ ದಾಸ್‌ ಹೇಳಿದ್ದಾರೆ.

ADVERTISEMENT

ಸದ್ಯ ಸಂಗ್ರಹಾಲಯದಲ್ಲಿರುವ ಹೆಣ್ಣು ಚಿರತೆಯೊಂದಿಗೆ ಇದನ್ನು ಬಿಡಲಾಗಿದೆ. ಇದಕ್ಕೆ ಕೇಂದ್ರೀಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ತಾಂತ್ರಿಕ ಸಮಿತಿಯ ಅನುಮತಿ ಪಡೆಯಲಾಗಿದೆ. ಇವುಗಳ ನಡುವಿನ ವರ್ತನೆಯನ್ನು ಕೆಲ ದಿನಗಳ ಕಾಲ ಪರಿಶೀಲಿಸಲಾಗುವುದು. ಇವುಗಳ ನಡುವಿನ ಅನ್ಯೋನ್ಯತೆ ಬೆಳೆದ ನಂತರವಷ್ಟೇ ಒಟ್ಟಿಗೆ ಪ್ರದರ್ಶನಕ್ಕೆ ಬಿಡಲಾಗುವುದು. ಅಲ್ಲಿಯವರೆಗೂ ಒಂದೊಂದನ್ನೇ ನಿರ್ದಿಷ್ಟ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಈ ಚಿರತೆಯು ಒಬ್ಬ ಮಹಿಳೆ ಹಾಗೂ ಬಾಲಕನನ್ನು ಕೊಂದಿತ್ತು. ಇನ್ನೂ ಕೆಲವರನ್ನು ಗಾಯಗೊಳಿಸಿತ್ತು. ಕಳೆದ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.