ADVERTISEMENT

ದೆಹಲಿ| ಶಾಹೀನ್‌ ಬಾಗ್‌ ಪ್ರತಿಭಟನಾ ಸ್ಥಳದಲ್ಲಿ ಮತ್ತೆ ಗುಂಡಿನ ದಾಳಿ: ವ್ಯಕ್ತಿ ವಶ

ಏಜೆನ್ಸೀಸ್
Published 1 ಫೆಬ್ರುವರಿ 2020, 13:07 IST
Last Updated 1 ಫೆಬ್ರುವರಿ 2020, 13:07 IST
ದಾಳಿಕೋರನ ಬಂಧನ
ದಾಳಿಕೋರನ ಬಂಧನ   

ನವದೆಹಲಿ: ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿಯುವಕನೊಬ್ಬ ಬಂದೂಕಿನ ದಾಳಿ ನಡೆಸಿದ ಮರುದಿನವೇ ಅದೇ ಸ್ಥಳದಲ್ಲಿ ಮತ್ತೊಬ್ಬ ಗುಂಡಿನದಾಳಿ ನಡೆಸಿದ ಘಟನೆ ಶನಿವಾರ ಸಂಜೆನಡೆದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಜಾಮಿಯಾ ಮಿಲಿಯಾ ವಿವಿ ಎದುರಿನಶಾಹೀನ್‌ ಬಾಗ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತದಿದ್ದಾರೆ. ಈ ಸ್ಥಳದಿಂದ ಕೇವಲ 50 ಮೀಟರ್‌ ಅಂತರದಲ್ಲಿ ಪೊಲೀಸ್‌ ಬ್ಯಾರಿಕೇಟ್‌ಗಳ ಸಮೀಪದಿಂದಲೇ ಗುಂಡು ಹಾರಿಸಲಾಗಿದೆ. 20 ವರ್ಷ ವಯಸ್ಸಿನ ದಾಳಿಕೋರನನ್ನು ಸರಿತಾ ವಿಹಾರ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಆತ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಯಾರೂ ಗಾಯಗೊಂಡಿಲ್ಲ. ದಾಳಿ ನಡೆಸಿದವನ ಹಿನ್ನಲೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ವಿಭಾಗದ ಜಂಟಿ ಪೊಲೀಸ್ ಆಯುಕ್ತ ದೆವೇಶ್‌ ಶ್ರಿವಾಸ್ತವ್‌ ತಿಳಿಸಿದರು.

ADVERTISEMENT

‘ಪೊಲೀಸರ ಸಮ್ಮುಖದಲ್ಲಿಯೇ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ ಮರುದಿನವೇಅಂತಹದ್ದೇಘಟನೆ ನಡೆಯುತ್ತದೆ ಎಂದಾದರೆ, ಪೊಲೀಸರನ್ನು ನಂಬುವುದಾದರು ಹೇಗೆ? ಅವರು ನಮ್ಮನ್ನು ರಕ್ಷಿಸುತ್ತಾರೆ ಎಂಬ ಅನುಮಾನ ಬರುತ್ತದೆ’ಎಂದು ಪ್ರತಿಭಟನಾಕಾರ ಆಸಿಫ್‌ ಮುಜ್ತಾಬ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.