ಪುಣೆ : ತಾಯಿ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಒಂದೂವರೆ ವರ್ಷದ ಮಗುವನ್ನು ಬಿಸಿ ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದಿದೆ. ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ವಿಕ್ರಮ್ ಕೊಲೇಕರ್ ಮಗುವನ್ನು ಕೊಂದ ದುಷ್ಕರ್ಮಿ. ಏಪ್ರಿಲ್ 6ರಂದು ಕೊಲೆ ನಡೆದಿದ್ದು, ಭಯದಿಂದ ಮಗುವಿನ ತಾಯಿ ಈ ವಿಷಯವನ್ನು ಪೊಲೀಸರಿಂದ ಮುಚ್ಚಿಟ್ಟಿದ್ದಳು ಎಂಬ ವಿಷಯ ಇದೀಗ ತಿಳಿದುಬಂದಿದೆ.
‘ಕೊಲೆಗಾರ ವಿಕ್ರಮ್ ಮತ್ತು ಮಗುವಿನ ತಾಯಿ ಕಿರಣಾ ನಡುವೆ ಅಕ್ರಮ ಸಂಬಂಧವಿತ್ತು. ಕಿರಣಾಳನ್ನು ಮದುವೆಯಾಗಲು ವಿಕ್ರಮ್ ಬಯಸಿದ್ದು, ತನ್ನನ್ನು ಮದುವೆಯಾಗುವಂತೆ ಕಿರಣಾ ಬಳಿ ಕೇಳಿದ್ದಾನೆ. ಮದುವೆಯಾಗಲು ಕಿರಣಾ ನಿರಾಕರಿಸಿದ್ದು, ಇದೇ ಕೋಪಕ್ಕೆ ಮಗುವನ್ನು ಕೊಂದಿದ್ದಾನೆ‘ ಎಂದು ಹಿರಿಯ ಇನ್ಸ್‌ಪೆಕ್ಟರ್ ವೈಭವ್ ಶಿಂಗಾರೆ ಹೇಳಿದ್ದಾರೆ
‘ಈ ಕೃತ್ಯ ನಡೆಯುವ ವೇಳೆ ಮಗುವಿನ ತಾಯಿ ಇದ್ದಳು. ಭಯದಿಂದ ವಿಷಯವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಇದೀಗ ದೂರು ನೀಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.
‘ನಾನು ಮದುವೆಯಾಗಲು ನಿರಾಕರಿಸುವುದೇ ನನ್ನ ಮಗುವಿನ ಕೊಲೆಗೆ ಕಾರಣವಾಗಿದೆ ಎಂದು ಕಿರಣಾ ದೂರಿನಲ್ಲಿ ಉಲ್ಲೇಖಸಿದ್ದಾರೆ. ದೂರಿನನ್ವಯ ವಿಕ್ರಮ್‌ನನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.