ನವದೆಹಲಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಮೂವರು ಮಕ್ಕಳಕತ್ತು ಸೀಳಿ ಹತ್ಯೆ ಮಾಡಿರುವ ದಾರುಣ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಶನಿವಾರ ನಡೆದಿದೆ.
ಆರೋಪಿಉಪೇಂದರ್ ಶುಕ್ಲಾ ಎಂಬಾತನನ್ನು ಬಂಧಿಸಲಾಗಿದೆ. ಈತ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪಾಠ ಹೇಳಿ ಜೀವನ ನಿರ್ವಹಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಅರ್ಚನಾ, ಎರಡು ತಿಂಗಳ ಹೆಣ್ಣು ಮಗು, ಐದು ವರ್ಷದ ಮಗ ಹಾಗೂ ಏಳು ವರ್ಷದ ಮಗಳನ್ನು ಶನಿವಾರ ಬೆಳಗಿನ ಜಾವ ಹತ್ಯೆ ಮಾಡಿದ್ದಾನೆ. ಆರೋಪಿಯ ಅತ್ತೆ ಕೂಡ ಅದೇ ಮನೆಯಲ್ಲಿದ್ದರು. ಆದರೆ ಈ ಕೃತ್ಯ ಅವರ ಗಮನಕ್ಕೆ ಬಂದಿರಲಿಲ್ಲ. ಬೆಳಿಗ್ಗೆ ಮಲಗುವ ಕೋಣೆ ಬಾಗಿಲನ್ನು ತೆರೆಯದ್ದರಿಂದ ಗಾಬರಿಯಾದ ಆಕೆ, ನೆರೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಬಾಗಿಲು ಮುರಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ವಿಜಯಕುಮಾರ್ ಹೇಳಿದ್ದಾರೆ.
ಕೊಲೆ ಮಾಡಿರುವುದಾಗಿ ಶುಕ್ಲಾ ಪತ್ರ ಬರೆದಿಟ್ಟಿದ್ದಾನೆ. ಆದರೆ, ಹತ್ಯೆಗೆ ಕಾರಣ ತಿಳಿಸಿಲ್ಲ. ರಾತ್ರಿ 1.30ರಲ್ಲಿಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಹತ್ಯೆಗೆ ಬಳಸಿದ ಚಾಕು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.