ಭುವನೇಶ್ವರ: ವರನೊಬ್ಬ ಸೈಕಲ್ ಸವಾರಿ ಮೂಲಕ ಮದುವೆ ಮಂಟಪಕ್ಕೆ ತೆರಳಿ, ದೇಶದಲ್ಲಿ ಏರುತ್ತಿರುವ ಇಂಧನ ಬೆಲೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವಿನೂತನ ಪ್ರತಿಭಟನೆ ಒಡಿಶಾದ ಭುವನೇಶ್ವರದಲ್ಲಿ ಬುಧವಾರ ನಡೆದಿದೆ.
ಮದುಮಗ ಸೈಕಲ್ ಸವಾರಿ ಹೊರಟ ಫೋಟೊಗಳು, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ತಮ್ಮ ಕುಟುಂಬವು ಮದುವೆ ಮೆರವಣಿಗಾಗಿ ದುಬಾರಿ ವ್ಯವಸ್ಥೆ ಮಾಡಿತ್ತು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲು ನಾನು ಮದುವೆಯ ಮಂಟಪಕ್ಕೆ ಬೈಸಿಕಲ್ ಮೂಲಕ ತೆರಳಿದೆ’ ಎಂದು ವರ ಸುಭ್ರಾಂಶು ಸಮಲ್ ಹೇಳಿದ್ದಾರೆ.
ಮದುವೆಯ ಉಡುಗೆ ತೊಟ್ಟು, ಸೈಕಲ್‌ನಲ್ಲಿ ಸುಮಾರು ಒಂದು ಕಿ.ಮೀ. ಸವಾರಿ ಹೊರಟ ಸುಭ್ರಾಂಶು ಸಮಲ್‌ಗೆ ಜನರಿಂದ ಭಾರಿ ಬೆಂಬಲವೂ ದೊರೆತಿದೆ. ಜನರಿಂದ ಸಿಕ್ಕ ಸ್ಪಂದನೆ ನನ್ನಲ್ಲಿ ಆಶ್ಚರ್ಯ ಉಂಟು ಮಾಡಿತು ಎಂದು ಸಮಲ್ ಹೇಳಿದ್ದಾರೆ.
ಮದುಮಗ ಸೈಕಲ್ ಏರಿ ಹೊರಟಾಗ ನಾಗರಿಕರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ನನ್ನಂತೆಯೇ ಬಹಳ ಮಂದಿ ಇಂಧನ ದರ ಏರಿಕೆಯಿಂದ ಕಂಗೆಟ್ಟಿದ್ದಾರೆ ಎಂದು ಸಮಲ್ ಹೇಳಿದ್ದಾರೆ.
ಗುರುವಾರದಂದು ಭುವನೇಶ್ವರದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹112.56 ಮತ್ತು ಡೀಸೆಲ್ ₹102.24 ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.