ನವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದಕೇಜ್ರಿವಾಲ್‌ಗೆವ್ಯಕ್ತಿಯೊಬ್ಬ ಹಲ್ಲೆ ಮಾಡಿರುವಘಟನೆ ಶನಿವಾರ ನಡೆದಿದೆ.
ಇಲ್ಲಿನ ಮೋತಿ ನಗರ ಪ್ರದೇಶದಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಎಂಕೇಜ್ರಿವಾಲ್ ನಿಂತಿದ್ದ ಜೀಪಿನ ಮೇಲೇರಿಅವರತ್ತ ನುಗ್ಗಿರುವ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದಾನೆ.
ಕಪಾಳಕ್ಕೆ ಹೊಡೆತ ಬೀಳುತ್ತಿದ್ದಂತೆ ಕೇಜ್ರಿವಾಲ್ ಗಾಬರಿಗೊಂಡು ಹಿಂದೆ ಸರಿದಿದ್ದಾರೆ. ಕೆಂಪು ಅಂಗಿ ಧರಿಸಿದ್ದ ವ್ಯಕ್ತಿ ಮತ್ತೆ ಅವರತ್ತ ನುಗ್ಗಲು ಯತ್ನಿಸುತ್ತಿರುವಾಗ ಎಎಪಿ ಕಾರ್ಯಕರ್ತರು ಆತನನ್ನು ಹಿಡಿದೆಳೆದು ಥಳಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ನವದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಎಪಿ ಅಭ್ಯರ್ಥಿ ಬ್ರಿಜೇಷ್ ಗೋಯಲ್ ಪರವಾಗಿ ಕೇಜ್ರಿವಾಲ್ ರೋಡ್ ಶೋ ಮೂಲಕ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಈ ಹಿಂದೆಯೂ ಹಲವು ಬಾರಿ ಹಲ್ಲೆ ನಡೆದಿವೆ.
2018ರ ನವೆಂಬರ್: ದೆಹಲಿ ಕಾರ್ಯಾಲಯ, ಅರವಿಂದ ಕೇಜ್ರಿವಾಲ್ ಅವರ ಕಚೇರಿ ಹೊರ ಭಾಗದಲ್ಲಿ ವ್ಯಕ್ತಿಯೊಬ್ಬ ಅವರ ಮೇಲೆ ಖಾರದ ಪುಡಿಎರಚಿದ್ದ.
2016: ವಾಯು ಮಾಲಿನ್ಯ ತಗ್ಗಿಸಲು ಸಮ–ಬೆಸ ಸಂಖ್ಯೆ ವಾಹನಗಳ ಸಂಚಾರ ನಿಯಮ ರೂಪಿಸಿದ್ದ ಕೇಜ್ರಿವಾಲ್, ಅದರ ಎರಡನೇ ಹಂತದ ವಿವರವನ್ನು ನೀಡುತ್ತಿರುವಾಗ ವ್ಯಕ್ತಿಯೊಬ್ಬ ಶೂ ಎಸೆದಿದ್ದ.
* ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ವಂದನಾರ್ಪಣೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕೇಜ್ರಿವಾಲ್ ಅವರ ಮೇಲೆ ಶಾಹಿ ಎರಚಿದ್ದರು.
2014: ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಕೇಜ್ರಿವಾಲ್ ಅವರ ಕಪಾಳಕ್ಕೆ ಹೊಡೆದಿದ್ದ. ಸುಲ್ತಾನ್‌ಪುರಿಯಲ್ಲಿ ನಡೆದ ಈ ಘಟನೆಯಲ್ಲಿ ಕೇಜ್ರಿವಾಲ್ ಅವರ ಕಣ್ಣಿನ ಕೆಳಗೆ ಗಾಯವಾಗಿತ್ತು.
ಹಲವು ಬಾರಿ ಎಂಜಿನ್ ಆಯಿಲ್ ಹಾಗೂ ಮೊಟ್ಟೆಗಳಿಂದಲೂ ಕೇಜ್ರಿವಾಲ್ ಅವರ ಮೇಲೆ ಹಲ್ಲೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.