ADVERTISEMENT

2 ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದ ತಂದೆ

ಪಿಟಿಐ
Published 17 ಡಿಸೆಂಬರ್ 2022, 11:16 IST
Last Updated 17 ಡಿಸೆಂಬರ್ 2022, 11:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಎರಡು ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದು, ತಾನೂ ಹಾರಿದ ಘಟನೆ ದೆಹಲಿಯ ಕಾಲ್‌ಕಾಜೀ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಆರೋಪಿ ಮನ್‌ ಸಿಂಗ್ (30) ಮತ್ತು ಪುತ್ರ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಪತ್ನಿ ಪೂಜಾ ಮಗು ಮತ್ತು ಅಜ್ಜಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ‘ಕುಡಿದು ಬಂದ ಆರೋಪಿ ಮೊದಲಿಗೆ ಪತ್ನಿಯೊಂದಿಗೆ ಜಗಳ ಆರಂಭಿಸಿ, ಮೊದಲನೇ ಮಹಡಿಗೆ ಮಗುವನ್ನು ಹೊತ್ತೊಯ್ದು 21 ಅಡಿ ಎತ್ತರದಿಂದ ಹೊರಗೆ ಎಸೆದ, ಬಳಿಕ ತಾನೂ ಹೊರಗೆ ಜಿಗಿದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.