ADVERTISEMENT

Kerala Blast: ಅಧಿಕ ವೇತನದ ಕೆಲಸ ಬಿಟ್ಟು, ಬಾಂಬ್‌ ಇಟ್ಟಿದ್ಯಾಕೆ? ಪೊಲೀಸರ ತನಿಖೆ

ಪಿಟಿಐ
Published 1 ನವೆಂಬರ್ 2023, 5:32 IST
Last Updated 1 ನವೆಂಬರ್ 2023, 5:32 IST
<div class="paragraphs"><p>ಕೇರಳದ ಎರ್ನಾಕುಳಂ ಜಿಲ್ಲೆಯ&nbsp;ಕಳಮಶ್ಶೇರಿಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿ ಡಾಮಿನಿಕ್ ಮಾರ್ಟಿನ್ ಎಂಬಾತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು</p></div>

ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿ ಡಾಮಿನಿಕ್ ಮಾರ್ಟಿನ್ ಎಂಬಾತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು

   

ಪಿಟಿಐ ಚಿತ್ರ

ಕೊಚ್ಚಿ: ಕೇರಳ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯು ಕೊಲ್ಲಿ ರಾಷ್ಟ್ರದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ನೌಕರಿ ಬಿಟ್ಟು, ಸ್ಫೋಟ ಸಂಚು ರೂಪಿಸಿದ್ದರ ಹಿಂದಿನ ರಹಸ್ಯ ಬೇಧಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ADVERTISEMENT

ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ಅ. 29ರಂದು ಕ್ರೈಸ್ತ ಸಮುದಾಯದವರನ್ನು ಗುರಿಯಾಗಿಸಿ ನಡೆದ ಬಾಂಬ್‌ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿರುವ ಡಾಮಿನಿಕ್ ಮಾರ್ಟಿನ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಸ್ಫೋಟ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಡಾಮಿನಿಕ್‌ ಪೊಲೀಸರಿಗೆ ಶರಣಾಗಿದ್ದ. ಕೃತ್ಯಕ್ಕೆ ಬಳಸಿದ ಬಾಂಬ್‌ ಸಿದ್ಧಪಡಿಸಲು ಖರೀದಿಸಿದ ಕಚ್ಚಾ ಸಾಮಗ್ರಿಗಳ ರಸೀದಿಗಳನ್ನು ನೀಡಿದ್ದಾನೆ. ಇದು ಪ್ರಕರಣದ ತನಿಖೆಯನ್ನು ಇನ್ನಷ್ಟು ಬಲಗೊಳಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಎದುರು ಭಾನುವಾರ ಶರಣಾದ ಮಾರ್ಟಿನ್, ಕೃತ್ಯಕ್ಕೆ ಬಳಸಿದ ಬಾಂಬ್‌ ಸಿದ್ಧಪಡಿಸಲು ಖರೀದಿಸಿದ ಕಚ್ಚಾ ಸಾಮಗ್ರಿಗಳ ರಸೀದಿಗಳನ್ನು ನೀಡಿದ್ದಾನೆ. ಇದು ಪ್ರಕರಣದ ತನಿಖೆಯನ್ನು ಇನ್ನಷ್ಟು ಬಲಗೊಳಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ ಕೈತುಂಬಾ ಸಂಬಳ ತಂದುಕೊಡುತ್ತಿದ್ದ ನೌಕರಿ ತ್ಯಜಿಸಿ ಈತ ಇಂಥ ಕೃತ್ಯಕ್ಕೆ ಕೈಹಾಕಿರುವುದನ್ನು ಗಮನಿಸಿದರೆ, ಈತ ಅಸಾಧಾರಣ ಬುದ್ಧಿವಂತ ಹಾಗೂ ತನ್ನ ಉದ್ದೇಶದ ಮೇಲೆ ಈತ ಹೆಚ್ಚಿನ ನಂಬಿಕೆ ಹೊಂದಿದ್ದ. ಎಲೆಕ್ಟ್ರಾನಿಕ್ಸ್ ಕುರಿತು ಈತನಿಗಿರುವ ಪ್ರೌಢಿಮೆಯು ಇನ್ನಷ್ಟು ಮಹತ್ವದ ವಿಷಯಗಳತ್ತ ತನಿಖೆಯನ್ನು ಕೊಂಡೊಯ್ಯಬಹುದು ಎಂದು ನಂಬಿಕೆ ಇದೆ ಎಂದು ಹೇಳಿದ್ದಾರೆ.

ತನ್ನ ಪರ ತಾನೇ ವಕಾಲತು: ಆರೋಪಿ ಮಾರ್ಟಿನ್‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನ್ನ ಪರವಾಗಿ ಯಾರಾದರೂ ವಕೀಲರನ್ನು ನೇಮಿಸಿಕೊಳ್ಳಿ ಎಂಬ ನ್ಯಾಯಾಲಯದ ಸಲಹೆಯನ್ನು ಮಾರ್ಟಿನ್ ತಿರಸ್ಕರಿಸಿ, ‘ಈ ಪರಿಸ್ಥಿತಿ ನನ್ನ ಆಯ್ಕೆ’ ತನ್ನ ಪರ ತಾನೇ ವಕಾಲತು ವಹಿಸುವುದಾಗಿ ಹೇಳಿದ್ದಾನೆ.  

ಕೊಲೆ, ಸ್ಪೋಟದಂಥ ವಿಧ್ವಂಸಕ ಕೃತ್ಯ ಸೇರಿದಂತೆ ಹಲವು ಆರೋಪಗಳು ಈತನ ಮೇಲಿವೆ. ಯಹೋವನ ಸಾಕ್ಷಿಗಳು ದೇಶಕ್ಕೆ ಮಾರಕವಾಗಿದ್ದು, ಅದನ್ನು ಈ ನೆಲದಿಂದ ನಿರ್ಮೂಲನೆ ಮಾಡಬೇಕು. ತಮ್ಮ ಉದ್ದೇಶವ ಮತ್ತು ಪ್ರವಚನಗಳನ್ನು ಬದಲಿಸಿಕೊಳ್ಳುವಂತೆ ಹಲವು ಬಾರಿ ಹೇಳಿದ್ದೆ. ಆದರೆ ಅವರು ಬದಲಿಸಿಕೊಂಡಿಲ್ಲ. ಹೀಗಾಗಿ ನನಗೆ ಯಾವುದೇ ಆಯ್ಕೆಗಳು ಉಳಿದಿರಲಿಲ್ಲ. ಹೀಗಾಗಿ ಈ ಕೃತ್ಯ ನಡೆಸಿರುವುದಾಗಿ ಈತ ವಿಡಿಯೊ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಇದು ಟಿ.ವಿ. ಚಾನಲ್‌ಗಳಲ್ಲಿ ಪ್ರಸಾರವಾಗಿದೆ. 

ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡವರಲ್ಲಿ 21 ಜನ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.