ADVERTISEMENT

ಜಿರೀಬಾಮ್‌ ಪ್ರಕರಣ: ನೆಕ್ಟರ್‌ ಸಂಜೆನ್‌ಬಮ್‌ ಕರ್ತವ್ಯದಿಂದ ಬಿಡುಗಡೆ

ಪಿಟಿಐ
Published 19 ನವೆಂಬರ್ 2024, 13:11 IST
Last Updated 19 ನವೆಂಬರ್ 2024, 13:11 IST
...
...   

ಇಂಫಾಲ: ಜಿರೀಬಾಮ್‌ ಗುಂಡಿನ ದಾಳಿ ಪ್ರಕರಣ ಸಂಬಂಧ ಮಣಿಪುರ ಸರ್ಕಾರವು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ನೆಕ್ಟರ್‌ ಸಂಜೆನ್‌ಬಮ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ.

ಭಾನುವಾರ ರಾತ್ರಿ ನಡೆದ ಗುಂಡಿನ ದಾಳಿಯ ಕಾರಣ ಪತ್ತೆ ಮಾಡಲು ಸರ್ಕಾರವು ಇಬ್ಬರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ಗೃಹಸಚಿವಾಲಯವು ಸೋಮವಾರ ತನ್ನ ಆದೇಶದಲ್ಲಿ ‘ಕರ್ನಲ್‌ (ನಿವೃತ್ತ ) ನೆಕ್ಟರ್‌ ಸಂಜೆನ್‌ಬಮ್‌ ಅವರ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಕಂಬ್ಯಾಟ್‌) ಸೇವೆಯನ್ನು ರದ್ದುಗೊಳಿಸಲಾಗಿದೆ’ ಎಂದು ತಿಳಿಸಿದೆ. 

ಸರ್ಕಾರ ರಚಿಸಿರುವ ಸಮಿತಿಯ ನೇತೃತ್ವವನ್ನು ಐಜಿಪಿ (ಗುಪ್ತಚರ) ಕೆ. ಕಬೀಬ್‌ ವಹಿಸಿದ್ದು, ಡಿಐಜಿ (ಶ್ರೇಣಿ III) ನಿಂಗ್ಸೆನ್‌ ವೋರ್ನ್‌ಗಮ್‌ ಸದಸ್ಯರಾಗಿದ್ದಾರೆ. ಈ ಸಮಿತಿಯು ಗುಂಡಿನ ದಾಳಿಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಿದೆ. ಅಧಿಕಾರಿಗಳು ಸೇರಿದಂತೆ ಯಾವುದೇ ವ್ಯಕ್ತಿಯಿಂದ ಅಪರಾಧ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲಿದೆ. ಸಮಿತಿಗೆ 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.