ADVERTISEMENT

ಎಎಫ್‌ಎಸ್‌ಪಿಎ ಹಿಂಪಡೆಯಲು ಕೇಂದ್ರಕ್ಕೆ ಮಣಿಪುರ ಸರ್ಕಾರ ಮನವಿ

ಪಿಟಿಐ
Published 17 ನವೆಂಬರ್ 2024, 4:38 IST
Last Updated 17 ನವೆಂಬರ್ 2024, 4:38 IST
<div class="paragraphs"><p>ಮಣಿಪುರದಲ್ಲಿ ಹಿಂಸಾಚಾರ, ಭದ್ರತಾ ಪಡೆ ನಿಯೋಜನೆ</p></div>

ಮಣಿಪುರದಲ್ಲಿ ಹಿಂಸಾಚಾರ, ಭದ್ರತಾ ಪಡೆ ನಿಯೋಜನೆ

   

(ಪಿಟಿಐ ಚಿತ್ರ)

ಇಂಫಾಲ: ಮಣಿಪುರದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಧಿಸಲಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಪುನರ್ ಪರಿಶೀಲಿಸಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಅಲ್ಲಿನ ರಾಜ್ಯ ಸರ್ಕಾರವು ಮನವಿ ಸಲ್ಲಿಸಿದೆ.

ADVERTISEMENT

ಹಿಂಸಾಚಾರ ಪೀಡಿತ ಜಿರೀಬಾಮ್ ಸೇರಿದಂತೆ ರಾಜ್ಯದ ಆರು ಪೊಲೀಸ್ ಠಾಣಾ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವು 1958ರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೊಳಿಸಿತ್ತು.

ಮತ್ತೊಂದೆಡೆ ರಾಜ್ಯದಲ್ಲಿ ಶಾಂತಿ ನೆಲೆಸಿ, ಕಾನೂನು ಸುವ್ಯವಸ್ಥೆ ಮರುಸ್ಥಾಪನೆಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯವು ಭದ್ರತಾ ಪಡೆಗಳಿಗೆ ಶನಿವಾರ ನಿರ್ದೇಶನ ನೀಡಿತು.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆ, ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಲು ಮತ್ತು ಕಂಡಲ್ಲಿ ಗುಂಡು ಹಾರಿಸಲು ಎಎಫ್‌ಎಸ್‌ಪಿಎ ಕಾಯ್ದೆಯಡಿ ಭದ್ರತಾ ಪಡೆಗೆ ಸಂಪೂರ್ಣ ಅಧಿಕಾರ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.