ADVERTISEMENT

ಮಣಿಪುರ | ಶಂಕಿತ ಉಗ್ರರಿಂದ ರಾಕೆಟ್ ದಾಳಿ: ಕಟ್ಟಡಗಳಿಗೆ ಹಾನಿ

ಪಿಟಿಐ
Published 6 ಸೆಪ್ಟೆಂಬರ್ 2024, 4:27 IST
Last Updated 6 ಸೆಪ್ಟೆಂಬರ್ 2024, 4:27 IST
<div class="paragraphs"><p> ರಾಕೆಟ್ ದಾಳಿ (ಸಾಂದರ್ಭಿಕ ಚಿತ್ರ)</p></div>

ರಾಕೆಟ್ ದಾಳಿ (ಸಾಂದರ್ಭಿಕ ಚಿತ್ರ)

   

– ಸಂಗ್ರಹ ಚಿತ್ರ

ಇಂಫಾಲ: ಮಣಿಪುರ ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಎರಡು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚುರ್‌ಚಂದಾಪುರ ಜಿಲ್ಲೆಯ ಗುಡ್ಡ ಪ್ರದೇಶದಿಂದ ಜನವಸತಿ ಇರುವ ಟ್ರೋಂಗ್‌ಲಾವೋಬಿ ಪ್ರದೇಶವನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಲಾಗಿದೆ. ಈ ಪ್ರದೇಶ ರಾಜ್ಯ ರಾಜಧಾನಿ ಇಂಫಾಲದಿಂದ 45 ಕಿ.ಮೀ. ದೂರದಲ್ಲಿದೆ. 3 ಕಿ.ಮೀ ದೂರ ಹಾರಬರಲ್ಲ ಸಾಮರ್ಥ್ಯದ ಲಾಂಚರ್ ಬಳಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ‍ಪೊಲೀಸರು ತಿಳಿಸಿದ್ದಾರೆ.

ಸುದೈವವಶಾತ್‌ ದಾಳಿಯಿಂದಾಗಿ ಯಾವುದೇ ಸಾವು ನೋವು ಉಂಟಾಗಿಲ್ಲ. ಆದರೆ ಸ್ಥಳದಲ್ಲಿದ್ದ ಸಮುದಾಯ ಭವನ ಹಾಗೂ ಖಾಲಿ ಕಟ್ಟಡವೊಂದಕ್ಕೆ ಹಾನಿ ಉಂಟಾಗಿದೆ.

ಇದರ ಜೊತೆಗೆ ಶಂಕಿತ ಉಗ್ರರು ಬಿಷ್ಣುಪುರ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಹಲವು ಸುತ್ತಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ‍ಪ್ರತಿದಾಳಿ ನಡೆಸಿವೆ.

ಗುರುವಾರ ರಾತ್ರಿ ಟ್ರೋಂಗ್‌ಲಾವೋಬಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಕುಂಬಿ ಗ್ರಾಮದಲ್ಲಿ ನೆಲಮಟ್ಟದಿಂದ ನೂರು ಮೀಟರ್‌ಗೂ ಕಡಿಮೆ ಅಂತರದಲ್ಲಿ ಹಲವು ಡ್ರೋನ್‌ಗಳು ಹಾರಾಡುತ್ತಿದ್ದವು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.