ಗುವಾಹಟಿ: ಮಣಿಪುರದಲ್ಲಿ ನಿರ್ಮಿಸುತ್ತಿರುವ ಜಗತ್ತಿನ ಅತಿ ಎತ್ತರದ ರೈಲು ಸೇತುವೆಯನ್ನೇ ಪ್ರವಾಸಿ ತಾಣವನ್ನಾಗಿ ಬಿಂಬಿಸಲು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ.
ನೋಣಿ ಜಿಲ್ಲೆಯಲ್ಲಿನ ಇಜೈ ನದಿ ಮೇಲೆ ಈ ಸೇತುವೆ ನಿರ್ಮಿಸಲಾಗುತ್ತಿದೆ. ರಾಜ್ಯದ ಯುವಕರಿಗೆ ಉದ್ಯೋಗ ಕಲ್ಪಿಸಲು ಈ ಯೋಜನೆ ಪೂರಕವಾಗಲಿದೆ ಎಂದು ಸರ್ಕಾರ ಹೇಳಿದೆ.
ಜಾಗತಿಕ ದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ನೋಣಿಯಲ್ಲಿ ಕಲ್ಪಿಸಿಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ರಾಜ್ಯದ 60 ವಿಧಾನಸಭೆ ಕ್ಷೇತ್ರಗಳಲ್ಲೂ ಸಹ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ₹30 ಕೋಟಿ ವೆಚ್ಚ ಮಾಡಲಾಗುವುದು. ಪ್ರವಾಸಿ ತಾಣಗಳು ಮತ್ತು ಆಕರ್ಷಕ ಬೆಟ್ಟದ ತಾಣಗಳನ್ನು ವೀಕ್ಷಿಸಲು ಹೆಲಿಕಾಪ್ಟರ್ ಸೇವೆ ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ.
ಉಗ್ರರ ಉಪಟಳದಿಂದ ಪ್ರವಾಸೋದ್ಯಮದ ಮೇಲೆ ಅಪಾರ ಪರಿಣಾಮ ಬೀರಿತ್ತು. ಇತ್ತೀಚಿನ ವರ್ಷಗಳಲ್ಲಿ ಉಗ್ರಗಾಮಿ ಚಟುವಟಿಕೆಗಳು ಕಡಿಮೆಯಾದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.
2014ರಲ್ಲಿ ಆರಂಭವಾದ ಈ ಸೇತುವೆಯನ್ನು ಈಶಾನ್ಯ ಗಡಿ ರೈಲ್ವೆ (ಎನ್ಎಫ್ಆರ್) ನಿರ್ಮಿಸು
ತ್ತಿದ್ದು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.