ನವದೆಹಲಿ: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಸತ್ತ ಇಲಿಗೆ ಹೋಲಿಸಿದ್ದಾರೆ.
ಭಾನುವಾರ ಸೋನಿಪತ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ಖಟ್ಟರ್, ಹೊಸ ಅಧ್ಯಕ್ಷರಿಗಾಗಿ ಕಾಂಗ್ರೆಸ್ ದೇಶದಾದ್ಯಂತ ಮೂರು ತಿಂಗಳುಗಳ ಕಾಲ ಹುಡುಕಾಟ ನಡೆಸಿತ್ತು. ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ ದೂರ ಹೋಗುತ್ತಿದೆ. ಇದೊಂದು ಒಳ್ಳೆಯ ನಡೆ ಎಂದು ನಾವು ಭಾವಿಸಿದ್ದೆವು. ಮೂರು ತಿಂಗಳ ನಂತರ ಅಧ್ಯಕ್ಷರಾಗಿದ್ದು ಯಾರು? ಸೋನಿಯಾ ಗಾಂಧಿ. ಬೆಟ್ಟ ಅಗೆದು ಇಲಿ ಸಿಕ್ಕಂತೆ, ಅದೂ ಸತ್ತ ಇಲಿ. ಅವರ ಪರಿಸ್ಥಿತಿ ಹೀಗಿದೆ ಎಂದಿದ್ದರು.
ಖಟ್ಟರ್ ಅವರ ಈ ಹೇಳಿಕೆಯನ್ನು ಖಂಡಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ , ಖಟ್ಟರ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಅದೇ ವೇಳೆ ಸಿಎಂ ಖಟ್ಟರ್ ಅವರು ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವುದು ಹೊಸತೇನೂ ಅಲ್ಲ. ಸೋನಿಯಾ ಗಾಂಧಿ ಅವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಮೂಲಕ ಅವರು ಎಲ್ಲ ಮಹಿಳೆಯರನ್ನು ಅವಮಾನಿಸಿದ್ದಾರೆ. ನಿಮ್ಮ ಈ ನಿಲುವಿನಿಂದಾಗಿಯೇ ಹರ್ಯಾಣ ಕ್ರೈಂ ಕ್ಯಾಪಿಟಲ್ ಎಂದೆನಿಸಿಕೊಂಡಿದೆ ಎಂದು ಖಟ್ಟರ್ ವಿರುದ್ಧಹರ್ಯಾಣ ಕಾಂಗ್ರೆಸ್ ಮುಖ್ಯಸ್ಥೆ ಕುಮಾರಿ ಸೆಲ್ಜಾ ಕಿಡಿ ಕಾರಿದ್ದಾರೆ.
ಮಾಫೀ ಮಾಂಗೋ ಖಟ್ಟರ್
ಸೋನಿಯಾಗಾಂಧಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಮನೋಹರ್ ಖಟ್ಟರ್ ಕ್ಷಮೆಯಾಚಿಸಲೇ ಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಟ್ವಿಟರ್‌ನಲ್ಲಿ #MaafiMaangoKhattar ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದೆ.
ಇದನ್ನೂ ಓದಿ:ಅತ್ಯಾಚಾರ ಹೆಚ್ಚಳ ಮುಸ್ಲಿಮರು ಕಾರಣ: ಬಿಜೆಪಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.