ADVERTISEMENT

ಹಿರೆನ್ ಕೊಲೆ: ವಾಜೆಯನ್ನು ಶಿವಾಜಿ ಮಹಾರಾಜ ಟರ್ಮಿನಸ್‌ಗೆ ಕರೆದೊಯ್ದ ಎನ್‌ಐಎ

ತನಿಖೆಗಾಗಿ ಘಟನೆಯ ಮರುಸೃಷ್ಟಿಗೆ ಪ್ರಯತ್ನ

ಪಿಟಿಐ
Published 6 ಏಪ್ರಿಲ್ 2021, 7:42 IST
Last Updated 6 ಏಪ್ರಿಲ್ 2021, 7:42 IST
ಥಾಣೆಯ ಮುಂಬ್ರಾಕ್ ಹಳ್ಳದ ಬಳಿ ಎನ್‌ಐಎ ತನಿಖೆ(ಸಂಗ್ರಹ ಚಿತ್ರ)
ಥಾಣೆಯ ಮುಂಬ್ರಾಕ್ ಹಳ್ಳದ ಬಳಿ ಎನ್‌ಐಎ ತನಿಖೆ(ಸಂಗ್ರಹ ಚಿತ್ರ)   

ಮುಂಬೈ: ಉದ್ಯಮಿ ಮನ್‌ಸುಖ್ ಹಿರೆನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಅಧಿಕಾರಿಗಳು ಪ್ರಕರಣದ ಆರೋಪಿ, ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಘಟನೆಯ ಮರುಸೃಷ್ಟಿಗಾಗಿ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ಗೆ(ಸಿಎಸ್‌ಎಂಟಿ) ಕರೆದೊಯ್ದರು.

ಹಿರೆನ್‌ ಹತ್ಯೆ ನಡೆದ ದಿನ ಸಚಿನ ವಾಜೆ ಅವರು ನೆರೆಯ ಠಾಣೆಗೆ ಹೋಗಲು ಸಿಎಸ್‌ಎಂಟಿಯಿಂದ ರೈಲು ಹತ್ತಿದ್ದರು. ಮಾರ್ಚ್‌ 4 ರಂದು ತನಿಖಾ ತಂಡ ಸಂಗ್ರಹಿಸಿದ ಸಿಸಿಟಿವಿ ದೃಶ್ಯಗಳಲ್ಲಿ ವಾಜೆ ಅವರು ಇದೇ ರೈಲ್ವೆ ನಿಲ್ದಾಣದಿಂದ ಠಾಣೆಗೆ ಹೋಗುವ ರೈಲು ಹತ್ತಿರುವ ದೃಶ್ಯ ಸೆರೆಯಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖಾ ತಂಡವು ಸೋಮವಾರ ತಡರಾತ್ರಿ ಸಿಎಸ್ಎಂಟಿಗೆ ವಾಜೆ ಅವರನ್ನು ಕರೆದೊಯ್ದಿತ್ತು. ಇದಾದ ನಂತರ ಮಾರ್ಚ್‌ 5ರಂದು ಹಿರೆನ್ ಮನ್‌ಸುಖ್ ಶವ ಪತ್ತೆಯಾದ ಠಾಣೆಯ ಮುಂಬ್ರಾಕ್‌ ಹಳ್ಳದ ಬಳಿಗೂ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಫೆಬ್ರವರಿ 25 ರಂದು ದಕ್ಷಿಣ ಉದ್ಯಮಿ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸದ ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆ ಪ್ರಕರಣ ಮತ್ತು ನಂತರ ಹಿರೆನ್ ಮನ್‌ಸುಖ್ ಹತ್ಯೆ ಪ್ರಕರಣದಲ್ಲಿ ಎನ್‌ಐಎ ಕಳೆದ ತಿಂಗಳು ಸಚಿನ್ ವಾಜೆ ಅವರನ್ನು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.