ADVERTISEMENT

ಜಮ್ಮು ಮತ್ತು ಕಾಶ್ಮೀರ | ಗಡಿಯಲ್ಲಿ ಮೂವರು ಉಗ್ರರ ಹತ್ಯೆ: ಚಿನಾರ್ ಕಾರ್ಪ್ಸ್‌

ಪಿಟಿಐ
Published 29 ಆಗಸ್ಟ್ 2024, 4:25 IST
Last Updated 29 ಆಗಸ್ಟ್ 2024, 4:25 IST
<div class="paragraphs"><p>ಭದ್ರತಾ ಪಡೆ ಕಾರ್ಯಾಚರಣೆ</p></div>

ಭದ್ರತಾ ಪಡೆ ಕಾರ್ಯಾಚರಣೆ

   

ಚಿತ್ರ ಕೃಪೆ: X/@ChinarcorpsIA 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಎರಡು ಪ್ರತ್ಯೇಕ ಘಟನೆಗಳಲ್ಲಿ ಒಳ ನುಸುಳುವ ಯತ್ನವನ್ನು ವಿಫಲಗೊಳಿಸಲಾಗಿದ್ದು, ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ನಂಬಲಾಗಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್‌ ತಿಳಿಸಿದೆ.

ADVERTISEMENT

ಗುಪ್ತಚರ ಮಾಹಿತಿಯ ಬೆನ್ನಲ್ಲೇ ಮಚ್ಚಲ್ ಮತ್ತು ತಂಗ್‌ಧಾರ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆಗಸ್ಟ್ 28ರ ಮಧ್ಯರಾತ್ರಿ ಹಾಗೂ ಆಗಸ್ಟ್ 29ರ ನಸುಕಿನ ವೇಳೆಯಲ್ಲಿ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿದೆ.

ಹವಾಮಾನ ವೈಪರೀತ್ಯದ ನಡುವೆಯೂ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ಚಿನಾರ್ ಕಾರ್ಪ್ಸ್‌ 'ಎಕ್ಸ್‌'ನಲ್ಲಿ ತಿಳಿಸಿದೆ.

ಕಾರ್ಯಾಚರಣೆ ಈಗಲೂ ಮುಂದುವರಿದಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.