ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು2022ರಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ 56 ವಿದೇಶಿಯರು ಸೇರಿ 186 ಉಗ್ರರು ಹತರಾಗಿದ್ದಾರೆ.
ಈ ವರ್ಷ 100 ಸ್ಥಳೀಯ ಯುವಕರನ್ನು ಭಯೋತ್ಪಾದಕ ಶ್ರೇಣಿಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. 2021ಕ್ಕೆ ಹೋಲಿಸಿದರೆ ಶೇ 37 ಕಡಿಮೆಯಾಗಿದೆ. 100 ಸ್ಥಳೀಯರ ಪೈಕಿ65 ಮಂದಿ ತಟಸ್ಥರಾಗಿದ್ದರೆ, 17 ಮಂದಿಯನ್ನು ಬಂಧಿಸಲಾಗಿದೆ. 18 ಮಂದಿ ಇನ್ನೂ ಸಕ್ರಿಯರಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ, 2022 ಭದ್ರತಾ ದೃಷ್ಟಿಯಿಂದ ಅತ್ಯಂತ ಶಾಂತಿಯುತವಾಗಿತ್ತು. ಪೊಲೀಸರ ಹೊಸ ವರ್ಷದ ನಿರ್ಣಯವು 'ಮಿಷನ್ ಝೀರೋ ಟೆರರ್' ಆಗಿದೆ ಎಂದರು.
ಮಾದಕ ವ್ಯಸನಿಗಳ ವಿರುದ್ಧ 1693 ಪ್ರಕರಣ ದಾಖಲಾಗಿದ್ದು, 212 ಕಿಲೋಗ್ರಾಂ ಹೆರಾಯಿನ್, 383 ಕಿಲೋಗ್ರಾಂ ಗಾಂಜಾ ಮತ್ತು 12 ಕಿಲೋಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.