ಬಸ್ತಾರ್: ಛತ್ತೀಸ್‍ಗಡದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ರಕ್ಷಣಾ ಸಿಬ್ಬಂದಿಗಳು ಮತ್ತು ದೂರದರ್ಶನದ ಛಾಯಾಗ್ರಾಹಕರೊಬ್ಬರು ಹತ್ಯೆಗೀಡಾಗಿದ್ದಾರೆ.
ಹತರಾಗಿರುವ ದೂರದರ್ಶನದ ಛಾಯಾಗ್ರಾಹಕನನ್ನು ಅಚ್ಯುತಾನಂದ ಸಾಹು, ಪೊಲೀಸರು ಸಬ್ ಇನ್ಸ್‌ಪೆಕ್ಟರ್ ರುದ್ರ ಪ್ರತಾಪ್ ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಂಗಲು ಎಂದು ಗುರುತಿಸಲಾಗಿದೆ.
ಇಲ್ಲನ ದಂತೇವಾಡಾದನಿಲವಾಯಾ ಅರಣ್ಯದಲ್ಲಿ ಬೆಳಗ್ಗೆ 11.20ಕ್ಕೆ ಈ ದಾಳಿ ನಡೆದಿತ್ತು.
ದಂತೇವಾಡಾದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶೂಟಿಂಗ್ ಮಾಡುವುದಕ್ಕಾಗಿ ದೂರದರ್ಶದ ಸಿಬ್ಬಂದಿಗಳು ಅಲ್ಲಿಗೆ ಬಂದಿದ್ದರು ಎಂದು ಛತ್ತೀಸ್‍ಗಡದ ವಿಶೇಷ ಪೊಲೀಸ್ ಅಧಿಕಾರಿ ಡಿ.ಎಂ.ಅವಸ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.