ADVERTISEMENT

ಮರಾಠ ಮೀಸಲಾತಿ|ಸೆ.16ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಉಪವಾಸ: ಮನೋಜ್‌ ಜರಾಂಗೆ

ಪಿಟಿಐ
Published 10 ಸೆಪ್ಟೆಂಬರ್ 2024, 9:59 IST
Last Updated 10 ಸೆಪ್ಟೆಂಬರ್ 2024, 9:59 IST
<div class="paragraphs"><p>ಮನೋಜ್‌ ಜರಾಂಗೆ&nbsp;</p></div>

ಮನೋಜ್‌ ಜರಾಂಗೆ 

   

ಛತ್ರಪತಿ ಸಂಭಾಜಿನಗರ: ಮರಾಠಾ ಮೀಸಲಾತಿ ಬೇಡಿಕೆಗೆ ಆಗ್ರಹಿಸಿ ಸೆ.16ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಮಂಗಳವಾರ ಹೇಳಿದ್ದಾರೆ.

ಜಾಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, 'ಸೆಪ್ಟೆಂಬರ್ 17 ಮುಕ್ತಿ ಸಂಗ್ರಾಮ ದಿನ (ಮರಾಠವಾಡ ವಿಮೋಚನಾ ದಿನ). ಅದೇ ದಿನದಂದು ನಾವು ಮೀಸಲಾತಿಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇವೆ. ಸೆಪ್ಟೆಂಬರ್ 16ರ ಮಧ್ಯರಾತ್ರಿಯಿಂದಲೇ ಸತ್ಯಾಗ್ರಹ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಫೆಬ್ರುವರಿಯಲ್ಲಿ ಅಂಗೀಕರಿಸಿದೆ. ಆದರೆ ಮರಾಠರನ್ನು ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗಕ್ಕೆ ಸೇರಿಸಬೇಕು ಎಂಬುವುದು ಜರಾಂಗೆ ಅವರ ಆಗ್ರಹವಾಗಿದೆ.

‘ಮರಾಠರನ್ನು ಕುಣಬಿಗಳೆಂದು ಘೋಷಿಸಿ, ಒಬಿಸಿ ಮೀಸಲಾತಿಯಿಂದ ನಮಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಹಾಗೂ ಅವರನ್ನು (ಮರಾಠರು ಮತ್ತು ಕುಣಬಿಗಳು) ಸಗೆ– ಸೋಯಾರೆ (ವಂಶವೃಕ್ಷದ ಸಂಬಂಧಿಕರು) ಎಂದು ತಿಳಿಸುವ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಬೇಕು' ಎಂದೂ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.