ಲಾಹೋರ್: ಗೂಂಡಾಗಿರಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪದಡಿ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್(ಪಿಎಂಎಲ್–ಎನ್) ಉಪಾಧ್ಯಕ್ಷೆ, ನವಾಜ್ ಷರೀಫ್ ಪುತ್ರಿ ಮರಿಯಂ ನವಾಜ್ ಹಾಗೂ ಆಕೆಯ ಪಕ್ಷದ 300 ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ಶುಕ್ರವಾರ ದಾಖಲಿಸಲಾಗಿದೆ.
ಭೂಅಕ್ರಮ ಪ್ರಕರಣದ ವಿಚಾರಣೆಗಾಗಿ ಲಾಹೋರ್‌ನಲ್ಲಿನ ‘ರಾಷ್ಟ್ರೀಯ ಲೆಕ್ಕಪರಿಶೋಧನಾ ಸಂಸ್ಥೆ’ಗೆಮೂರು ವಾರದ ಹಿಂದೆ ನವಾಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡೆದಿದ್ದ ಪೊಲೀಸರ ಜೊತೆಗಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿಎಂಎಲ್–ಎನ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದೆ. ಇದರಲ್ಲಿ ಭಯೋತ್ಪಾದನೆ ನಿಗ್ರಹ ಕಾಯ್ದೆಯ(ಎಟಿಎ) ಸೆಕ್ಷನ್ 7ನ್ನು ಸೇರಿಸಲಾಗಿದೆ. ಇದನ್ನು ಪಿಎಂಎಲ್–ಎನ್ ಖಂಡಿಸಿದ್ದು, ಇದರ ಹಿಂದೆ ಪ್ರಧಾನಿ ಇಮ್ರಾನ್ ಖಾನ್ ಪಿತೂರಿ ಇದೆ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.