ADVERTISEMENT

ಮಥುರಾ: ಶಾಹಿ ಈದ್ಗಾ ಮಸೀದಿ ಸರ್ವೆ ಕಾರ್ಯಕ್ಕೆ ಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 14:10 IST
Last Updated 5 ಏಪ್ರಿಲ್ 2023, 14:10 IST
-
-   

ಲಖನೌ: ಕಂದಾಯ ಇಲಾಖೆ ನಡೆಸುತ್ತಿರುವ, ಮಥುರಾದ ಶಾಹಿ ಈದ್ಗಾ ಮಸೀದಿಯ ಸರ್ವೆ ಕಾರ್ಯಕ್ಕೆ ನ್ಯಾಯಾಲಯ ಬುಧವಾರ ತಡೆ ನೀಡಿದೆ.

ಈದ್ಗಾ ಮಸೀದಿ ಸಮಿತಿ ಹಾಗೂ ಸುನ್ನಿ ವಕ್ಫ್‌ ಬೋರ್ಡ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಥುರಾ ಜಿಲ್ಲಾ ನ್ಯಾಯಾಲಯ ನಡೆಸಿತು. ವಿಚಾರಣೆಯನ್ನು ಏಪ್ರಿಲ್‌ 13ಕ್ಕೆ ಮುಂದೂಡಿತು.

‘ತಮ್ಮ ವಾದವನ್ನು ಆಲಿಸದೇ ಮಸೀದಿಯ ಸರ್ವೆ ನಡೆಸಲು ಆದೇಶ ಹೊರಡಿಸಲಾಗಿದೆ. ಹಿಂದೂಗಳು ಸಲ್ಲಿಸಿರುವ ಅರ್ಜಿಯು ಸಮರ್ಥನೀಯವೇ ಎಂಬ ಬಗ್ಗೆ ಕೋರ್ಟ್ ಮೊದಲು ನಿರ್ಧರಿಸಬೇಕಿತ್ತು’ ಎಂಬುದು ಈದ್ಗಾ ಮಸೀದಿ ಸಮಿತಿಯ ವಾದವಾಗಿದೆ.

ADVERTISEMENT

ಈ ಮಸೀದಿಯು ಶ್ರೀಕೃಷ್ಣ ಜನ್ಮಭೂಮಿ ಪಕ್ಕದಲ್ಲಿದೆ. ಹಿಂದೂ ಪಕ್ಷಗಾರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು, ವಿವಾದಿತ ಸ್ಥಳದ ಸರ್ವೆ ನಡೆಸಿ, ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗೆ ಕಳೆದ ತಿಂಗಳು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.