ಲಖನೌ : ಬಿಎಸ್‌ಪಿ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿರುವ ಪಕ್ಷದಮುಖ್ಯಸ್ಥೆ ಮಾಯಾವತಿ,ಲೋಕಸಭೆಯ ನಾಯಕರನ್ನಾಗಿ ಡ್ಯಾನಿಷ್ ಅಲಿ ಅವರನ್ನು ಆಯ್ಕೆ ಮಾಡಿದ್ದಾರೆ.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಸಹೋದರ ಆನಂದ್‌ಕುಮಾರ್ ಹಾಗೂ ರಾಷ್ಟ್ರೀಯ ಸಂಚಾಲರನ್ನಾಗಿ ಸೋದರ ಸಂಬಂಧಿ ಆಕಾಶ್ ಕುಮಾರ್ ಅವರನ್ನು ಭಾನುವಾರ ನೇಮಕ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಅಮೋರಾ ಸಂಸದ ಡ್ಯಾನಿಷ್ ಅಲಿ ಅವರನ್ನು ಲೋಕಸಭೆಯ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ನಗಿನಾ ಮೀಸಲು ಕ್ಷೇತ್ರದ ಸಂಸದ ಗಿರೀಶ್ ಚಂದ್ರ ಅವರನ್ನು ಮುಖ್ಯಸಚೇತರನ್ನಾಗಿ ನೇಮಕ ಮಾಡಲಾಗಿದೆ.
ಲಖನೌದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಲು ನಿರಾಕರಿಸಿದ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ, ಇದು ಬಿಎಸ್‌ಪಿ ಆಂತರಿಕ ವಿಷಯ ಎಂದಿದ್ದಾರೆ.
ಅದೇ ವೇಳೆ ಮಾಯಾವತಿಯವರುಪಕ್ಷದಲ್ಲಿ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದ ಬಿಜೆಪಿ ವಕ್ತಾರ ಶಲಬ್ ಮಣಿ ತ್ರಿಪಾಠಿ, ಪ್ರಧಾನ ಹುದ್ದೆಗಳನ್ನು ದಲಿತ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ನೀಡದೆ ಅವರು ಸಹೋದರ ಮತ್ತು ಸಂಬಂಧಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಅವರು ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿರುವ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ದಾರಿ ತುಳಿಯುತ್ತಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.