ನವದೆಹಲಿ:ಮಾಯಾವತಿ ವಿದ್ಯುತ್ ಪ್ರವಹಿಸುತ್ತಿರುವ ತಂತಿ, ಅವರನ್ನು ಮುಟ್ಟಿದರೆ ಸಾವು ಸಂಭವಿಸುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್ ಹೇಳಿದ್ದಾರೆ.
ಸಮಾಜ ಕಲ್ಯಾಣ ಮತ್ತು ಎಸ್‌ಸಿ/ ಎಸ್‌ಟಿ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರಾಗಿರುವ ಗಿರಿರಾಜ್ ಸಿಂಗ್, ಬಿಜೆಪಿ ಆಕೆಯನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ ಜೀವ ಕಾಪಾಡಿತ್ತು. ಆದರೆ ಅವರು ನಮ್ಮನ್ನು ಮೋಸ ಮಾಡಿದರು.
ಬಿಎಸ್‌ಪಿ ಸಂಸ್ಥಾಪಕ ಕಾನ್ಶೀ ರಾಮ್ ಅವರು ಸಹಜ ಸಾವಿಗೀಡಾಗಿಲ್ಲ. ಅವರದ್ದು ಸಂಶಯಾಸ್ಪದ ರೀತಿಯಲ್ಲಿ ಸಾವು ಸಂಭವಿಸಿತ್ತು. ಮಾಯಾವತಿಯವರ ಕಣ್ಗಾವಲಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಾಯಾವತಿ ಕಾನ್ಶೀ ರಾಮ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಅವರ ತಂಗಿ ಹೇಳುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ನಾನು ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಘನತೆ ಮಾರಿದ ಮಾಯಾವತಿ: ಆರೋಪ
1995ರಲ್ಲಿ ನಡೆದ ಕುಖ್ಯಾತ ಗೆಸ್ಟ್ ಹೌಸ್ ಪ್ರಕರಣದಲ್ಲಿಬಿಜೆಪಿ ನಾಯಕ ದಿವಂಗತ ಬ್ರಹ್ಮ ದತ್ತ ದ್ವಿವೇದಿ ಅವರು ಮಾಯಾವತಿಯ ಜೀವ ಕಾಪಾಡಿದ್ದರು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆಯಾಗಿ ಮಾಯಾವತಿ ಅವರು ಬುಧವಾರ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದರು.
ಇದನ್ನೂ ಓದಿ:ಬಿಎಸ್‌ಪಿ ಅಧ್ಯಕ್ಷೆಯಾಗಿ ಮಾಯಾವತಿ ಪುನರಾಯ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.