ADVERTISEMENT

ಕಸ್‌ಗಂಜ್‌ ಲಾಕಪ್‌ಡೆತ್: ಉನ್ನತ ಮಟ್ಟದ ತನಿಖೆಗೆ ಮಾಯಾವತಿ ಆಗ್ರಹ

ಪಿಟಿಐ
Published 11 ನವೆಂಬರ್ 2021, 6:16 IST
Last Updated 11 ನವೆಂಬರ್ 2021, 6:16 IST
ಮಾಯಾವತಿ
ಮಾಯಾವತಿ   

ಲಖನೌ: ಕಸ್‌ಗಂಜ್‌ ಜಿಲ್ಲೆಯಲ್ಲಿ ಪೊಲೀಸ್‌ ವಶದಲ್ಲಿದ್ದ ವ್ಯಕ್ತಿಯ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಒತ್ತಾಯಿಸಿದ್ದಾರೆ. ಉತ್ತರಪ್ರದೇಶ ಸರ್ಕಾರವು ಲಾಕಪ್‌ಡೆತ್‌ ತಡೆಯಲು ವಿಫಲವಾಗಿದೆ ಎಂದೂ ಟೀಕಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಠಾಣೆಗೆ ಕರೆಸಲಾಗಿದ್ದ ಯುವಕ ಮಂಗಳವಾರ ಪೊಲೀಸರ ವಶದಲ್ಲಿದ್ದಾಗಲೇ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ. ಆತನ ಕುಟುಂಬದ ಸದಸ್ಯರು ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಆದರೆ ಪೊಲೀಸರು, ‘22 ವರ್ಷದ ಅಲ್ತಾಫ್‌ ಎಂಬಾತ ಲಾಕಪ್‌ನ ಶೌಚಾಲಯದಲ್ಲಿ, ತನ್ನ ಜಾಕೆಟ್‌ನಲ್ಲಿದ್ದ ದಾರವನ್ನೇ ಕುತ್ತಿಗೆಗೆ ಬಿಗಿದುಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾನೆ’ ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಐವರು ಪೊಲೀಸರನ್ನು ಅಮಾನತುಪಡಿಸಲಾಗಿದೆ.

ADVERTISEMENT

ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಮಾಯಾವತಿ ಅವರು, ‘ಪೊಲೀಸರ ವಶದಲ್ಲಿ ಮತ್ತೊಬ್ಬ ಯುವಕ ಮೃತಪಟ್ಟಿದ್ದಾನೆ. ಇದು, ನಾಚಿಕೆಗೇಡು. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.