ಲಖನೌ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಅವರು ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
ಬಿಎಸ್‌ಪಿ ಪಕ್ಷದ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಅಧಿಕಾರಿಗಳು, ಹಿರಿಯ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಮತ್ತು ಪಕ್ಷದ ರಾಜ್ಯ ಘಟಕ ಮತ್ತು ದೇಶದಾದ್ಯಂತ ಆಯ್ಕೆಯಾದ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಪಕ್ಷ ಮಾಹಿತಿ ನೀಡಿದೆ.
68 ವರ್ಷದ ಮಾಯಾವತಿ ಅವರು ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ದಲಿತ, ಆದಿವಾಸಿ, ಒಬಿಸಿ ಸಮುದಾಯಗಳ ಜನರ ಏಳಿಗೆಗಾಗಿ ಯಾವುದೇ ರೀತಿಯ ತ್ಯಾಗಕ್ಕೆ ಸಿದ್ಧವಿರುವುದಾಗಿ ಮಾಯಾವತಿ ಅವರು ಪಕ್ಷದ ಬೆಂಬಲಿಗರಿಗೆ ಭರವಸೆ ನೀಡಿರುವುದಾಗಿ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಯಾವತಿ ಅವರು ಸಕ್ರಿಯ ರಾಜಕಾರಣಿದಿಂದ ನಿವೃತ್ತರಾಗುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದ ಅವರು, 'ದಲಿತರು ಹಾಗೂ ಇತರ ಸಮಾಜದಲ್ಲಿರುವ ದುರ್ಬಲ ಸಮುದಾಯಗಳ ಏಳಿಗೆಗಾಗಿ ಹೋರಾಟ ನಡೆಸಲಿದ್ದೇನೆ’ ಎಂದು ತಿಳಿಸಿದ್ದರು.
‘ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ’ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.