ADVERTISEMENT

MCD Election Results | ಈ ಗೆಲುವು ನಮಗೆ ಬಂದ ದೊಡ್ಡ ಜವಾಬ್ದಾರಿ: ಸಿಸೋಡಿಯಾ

ನಾವು ವಿಶ್ವದ ಅತೀ ದೊಡ್ಡ ಪಕ್ಷವನ್ನು ಮಣಿಸಿದ್ದೇವೆ ಎಂದ ಸಿಸೋಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2022, 9:53 IST
Last Updated 7 ಡಿಸೆಂಬರ್ 2022, 9:53 IST
ಮನೀಶ್ ಸಿಸೋಡಿಯಾ (ಪಿಟಿಐ ಚಿತ್ರ)
ಮನೀಶ್ ಸಿಸೋಡಿಯಾ (ಪಿಟಿಐ ಚಿತ್ರ)   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಗೆದ್ದಿರುವುದಕ್ಕೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.

‘ಇದು ಗೆಲುವು ಮಾತ್ರವಲ್ಲ, ನಮಗೆ ಬಂದ ದೊಡ್ಡ ಜವಾಬ್ದಾರಿ‘ ಎಂದು ಅವರು ನುಡಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇರಿಸಿದ ದೆಹಲಿಯ ಜನತೆಗೆ ಧನ್ಯವಾದಗಳು. ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ್ಯ ಋಣಾತ್ಮಕವಾದ ಪಕ್ಷವನ್ನು ಮಣಿಸಿ, ನಂಬಿಕಸ್ಥ ಕೇಜ್ರಿವಾಲ್‌ ಅವರನ್ನು ಜನರು ಗೆಲ್ಲಿಸಿದ್ದಾರೆ. ಇದು ನಮಗೆ ಕೇವಲ ಜಯ ಮಾತ್ರವಲ್ಲ. ನಮಗೆ ಬಂದ ದೊಡ್ಡ ಜವಾಬ್ದಾರಿ‘ ಎಂದು ಅವರು ಹೇಳಿದ್ದಾರೆ.

ADVERTISEMENT

ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಅಧಿಕಾರ ಹಿಡಿದಿದೆ. ಆ ಮೂಲಕ ಪಾಲಿಕೆಯಲ್ಲಿ 15 ವರ್ಷಗಳ ಬಿಜೆಪಿ ಪಾರುಪತ್ಯ ಅಂತ್ಯವಾಗಿದೆ.

ದೆಹಲಿ ವಿಧಾನಸಭೆಯಲ್ಲಿ ಸತತ ಗೆಲುವು ಸಾಧಿಸಿದ್ದರೂ, ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಎಎಪಿ ವಿಫಲವಾಗಿತ್ತು. ಇದೀಗ 250 ವಾರ್ಡ್‌ಗಳಲ್ಲಿ ಎಎಪಿ 134 ವಾರ್ಡುಗಳನ್ನು ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.