ಭೋಪಾಲ್:ಸರ್ದಾರ್ ಸರೋವರಜಲಾಶಯದ ಸುತ್ತಲಿನ ಪ್ರವಾಹಪೀಡಿತ ಪ್ರದೇಶಗಳಲ್ಲಿರುವ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕೈಗೊಂಡಿದ್ದಅನಿರ್ದಿಷ್ಟಾವಧಿ ಉಪವಾಸವನ್ನು ಸಾಮಾಜಿಕ ಕಾರ್ಯಕರ್ತೆಮೇಧಾ ಪಾಟ್ಕರ್ ಸೋಮವಾರ ರಾತ್ರಿ ಕೊನೆಗೊಳಿಸಿದ್ದಾರೆ.
ಬೇಡಿಕೆ ಈಡೇರಿಸುವುದಾಗಿ ಮಧ್ಯ ಪ್ರದೇಶ ಸರ್ಕಾರ ಭರವಸೆ ನೀಡಿದ್ದರಿಂದ ಮೇಧಾ ಅವರು 9 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಮೇಧಾ ಎಂಬ ತಾಯಿ, ನರ್ಮದೆಯ ಮಗಳು
ಆಗಸ್ಟ್ 25ರಂದು ಬಡ್ವಾನಿಜಿಲ್ಲೆಯಲ್ಲಿ ಮೇಧಾ ಅವರು ನರ್ಮದಾ ಚುನೌತಿ ಸತ್ಯಾಗ್ರಹ ಆರಂಭಿಸಿದ್ದರು. ನಾಲ್ಕು ದಿನಗಳ ನಂತರ ಎಂಟು ಗ್ರಾಮಸ್ಥರು ಈ ಸತ್ಯಾಗ್ರಹಕ್ಕೆ ಕೈ ಜೋಡಿಸಿದರು. ಸೆಪ್ಟೆಂಬರ್ 3ರಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮೇಧಾ ಅವರು ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್‌ಸಿ ಬೆಹರ್ ಅವರನ್ನು ಕಳಿಸಿ ಬೇಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು.
ಸತ್ಯಾಗ್ರಹದ ಬಗ್ಗೆ ಕಮಲ್‌ನಾಥ್ ಅವರ ಕಾಳಜಿಯನ್ನು ಬೆಹರ್, ಮೇಧಾ ಪಾಟ್ಕರ್‌ಗೆ ತಿಳಿಸಿದ್ದು ಸರ್ದಾರ್ ಸರೋವರ್ ಜಲಾಶಯದ ನೀರಿನ ಮಟ್ಟವನ್ನು ಇಳಿಸಲು ಸರ್ಕಾರ ಪ್ರಯತ್ನಿಸುತ್ತಿದೆಎಂದಿದ್ದಾರೆ.
ಬೆಹರ್ ಅವರು ಮೇಧಾ ಅವರಿಗೆ ನಿಂಬೆ ಹಣ್ಣಿನ ರಸ ನೀಡಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ್ದಾರೆ.
ನರ್ಮದಾ ಬಚಾವೊ ಆಂದೋಲನದ ಮುಖಂಡರು ಸೆಪ್ಟೆಂಬರ್9ರಂದು ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.