ADVERTISEMENT

ಬಿಜೆಪಿ ಆಡಳಿತದಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಮಾಧ್ಯಮಗಳು: ಪಿಣರಾಯಿ ವಿಜಯನ್‌

ಪಿಟಿಐ
Published 8 ಏಪ್ರಿಲ್ 2024, 9:31 IST
Last Updated 8 ಏಪ್ರಿಲ್ 2024, 9:31 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ಪತ್ತಿನಂತಿಟ್ಟ(ಕೇರಳ): ಬಿಜೆಪಿಯ ಆಡಳಿತಾವಧಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಸಂಘಪರಿವಾರದ ವಿರುದ್ಧ ವರದಿ ಮಾಡುವ ಧೈರ್ಯ ತೋರುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ನಂತರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ನಿರಂತರವಾಗಿ ಕುಸಿಯುತ್ತಿದೆ. 2023ರ ಸೂಚ್ಯಂಕದಲ್ಲಿ ವಿಶ್ವದ 180 ದೇಶಗಳ ಪೈಕಿ ಭಾರತ 161ನೇ ಸ್ಥಾನಕ್ಕೆ ಕುಸಿದಿತ್ತು’ ಎಂದರು.

‘ಸರ್ವಾಧಿಕಾರಿ ಸರ್ಕಾರಗಳು ಮಾಧ್ಯಮಗಳನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತವೆ. ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಹಾಡಿ ಹೊಗಳದ ಮಾಧ್ಯಮಗಳನ್ನು ನಿರ್ದಾಕ್ಷಿಣ್ಯವಾಗಿ ಗುರಿ ಮಾಡಲಾಗುತ್ತಿದೆ’ ಎಂದರು.

ADVERTISEMENT

‘2020ರ ದೆಹಲಿ ಗಲಭೆ ಪ್ರಕರಣವನ್ನು ಪ್ರಸಾರ ಮಾಡಿದ್ದಕ್ಕಾಗಿ ಕೇರಳದ ಎರಡು ಸುದ್ದಿವಾಹಿನಿಗಳ ಪರವಾನಗಿಯನ್ನು ರದ್ದುಗೊಳಿಸಲಾಯಿತು. ಆದಾಯ ಇಲಾಖೆಯ ಕಿರುಕುಳಕ್ಕೆ ಬೇಸತ್ತ ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ ಭಾರತದಲ್ಲಿನ ತನ್ನ ಕಚೇರಿಗೆ ಬೀಗ ಹಾಕಬೇಕಾಯಿತು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.