ಮೀರತ್: ಎರಡು ದಿನಗಳ ಹಿಂದೆ ಕಾಲೇಜು ಕಟ್ಟಡದಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಮೀರತ್‌ನ ಸುಭಾರ್ತಿ ವೈದ್ಯಕೀಯ ಕಾಲೇಜಿನ ದಂತ ವೈದ್ಯಕೀಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ 4ನೇ ಮಹಡಿಯಿಂದ ಕೆಳಗೆ ಹಾರಿದ್ದರು.
ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ಅದೇ ವಿಭಾಗದ ವಿದ್ಯಾರ್ಥಿ ಸಿದ್ಧಾಂತ್ ಕುಮಾರ್ ಪನ್ವಾರ್‌ನನ್ನು ಬಂಧಿಸಲಾಗಿದೆ ಮತ್ತು ಜೈಲಿನಲ್ಲಿ ಕೂಡಿಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಕಾಂಬೋಜ್ ಹೇಳಿದ್ದಾರೆ.
22 ವರ್ಷದ ವಿದ್ಯಾರ್ಥಿನಿ ವನಿಯಾ ಅಸದ್ ಕಾಲೇಜಿನ ಲೈಬ್ರರಿ ಕಟ್ಟಡದಿಂದ ಹಾರಿದ್ದರು. ಆರೋಪಿ ಸಿದ್ಧಾಂತ್, ಅಸದ್ ಅವರಿಗೆ ಎಲ್ಲರ ಎದುರಲ್ಲಿ ಕಪಾಳಕ್ಕೆ ಹೊಡಿದ್ದರು. ಇದರಿಂದ ಅಸದ್ ಮನನೊಂದಿದ್ದರು ಎಂಬುದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ರಾಜೇಶ್ ಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿನಿ ಕಾಲೇಜಿನ ಲೈಬ್ರರಿ ಕಟ್ಟಡದಿಂದ ಕೆಳಗೆ ಹಾರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿಯೂ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.