ಗುವಾಹಟಿ: ಮೇಘಾಲಯದಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ಸೋಮವಾರ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಸೇರಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್ ಒಬ್ಬರೇ ಶಾಸಕರು ಇದ್ದಾರೆ.
ಮಾವ್ತಿಯ ಶಾಸಕ ಚಾರ್ಲ್ಸ್ ಮಾರ್ನೆಗರ್, ನೋಂಗ್‌ಸ್ಟಾಯಿನ್ ಶಾಸಕ ಗ್ಯಾಬ್ರಿಯಲ್ ವಾಲಾಂಗ ಮತ್ತು ಉಮ್ಸಿನಿಂಗ್ ಶಾಸಕ ಸೆಲೆಸ್ಟೀನ್ ಲಿಂಗ್ಡೋ ಅವರು ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾ ಅವರ ಸಮ್ಮುಖದಲ್ಲಿ ಎನ್‌ಪಿಪಿ ಪಾಳಯಕ್ಕೆ ಸೇರಿದರು.
ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಆಗಸ್ಟ್ 16ರಂದು ಕಾಂಗ್ರೆಸ್‌ನ ಮಾರ್ಗ್ನರ್ ಮತ್ತು ವಾಲಾಂಗ್ ಅವರನ್ನು ಅಮಾನತು ಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಕಾಂಗ್ರೆಸ್‌ನ ಮೂವರು ಶಾಸಕರು ಎನ್‌ಪಿಪಿಯೊಂದಿಗೆ ವಿಲೀನಗೊಳ್ಳುವುದಕ್ಕೆ ಅನುಮತಿ ನೀಡಿ ಮೇಘಾಲಯ ವಿಧಾನಸಭೆಯ ಸ್ಪೀಕರ್ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.