ಶಿಲ್ಲಾಂಗ್: ಮೇಘಾಲಯದ ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಗೆಲುವು ಪಡೆದಿದ್ದಾರೆ.
‘20ನೇ ಸುತ್ತಿನ ಮತ ಎಣಿಕೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚಾರ್ಲೊಟ್ಟೆ ಡಬ್ಲ್ಯು ಮೊಮಿನ್ ವಿರುದ್ಧ ಕಾನ್ರಾಡ್‌ಅವರು 8,400 ಮತಗಳ ಅಂತರದಿಂದ ಜಯಗಳಿಸಿದರು’ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಎಫ್.ಆರ್. ಖಾರ್‌ಕೊನ್‌ಗೊರ್ ತಿಳಿಸಿದರು.
ಮೇಘಾಲಯದಲ್ಲಿ ಎನ್‌ಪಿಪಿ ನೇತೃತ್ವದ ಆರು ಪಕ್ಷಗಳ ಮೇಘಾಲಯ ಪ್ರಜಾಸತ್ಮಾತ್ಮಕ ಒಕ್ಕೂಟ (ಎಂಡಿಎ) ಅಧಿಕಾರದಲ್ಲಿದೆ.
ಸಂಖ್ಯಾಬಲ ಹೆಚ್ಚಳ: ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಂಡಿಎ ಮೈತ್ರಿಕೂಟ ಇಬ್ಬರು ಶಾಸಕರು ಗೆಲ್ಲುವ ಮೂಲಕ ಆಡಳಿತರೂಢಾ ಮೈತ್ರಿಕೂಟದ ಬಲ 37ರಿಂದ 39ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.