ಶಿಲ್ಲಾಂಗ್: ಮೇಘಾಲಯದ ಸುಮಾರು 70 ಗ್ರಾಮಗಳಲ್ಲಿ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ ‘ಬೇರುಗಳ ತೂಗುಸೇತುವೆ’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು ಕುರಿತ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪ್ರಕೃತಿ ಸಹಜವಾಗಿ ಮೂಡಿರುವ ಈ ತೂಗು ಸೇತುವೆಗಳು ಸಾಮಾಜಿಕ, ಸಾಂಸ್ಕೃತಿಕವಾಗಿ ಸ್ಥಳೀಯ ಜನರು ಪ್ರಕೃತಿಯ ಜೊತೆಗೆ ಬೆಸೆದುಕೊಂಡಿರುವುದರ ಸಂಕೇತವಾಗಿ ಹೆಸರಾಗಿವೆ.
‘ಮೇಘಾಲಯದ ಸಾಂಸ್ಕೃತಿಕ ಹೆಗ್ಗುರುತು ‘ಬೇರುಗಳ ಸೇತುವೆಗಳು’ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿರುವುದು ಸಂತಸ ಮೂಡಿಸಿದೆ’ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.
ಈ ಕುರಿತು ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಯಶಸ್ಸಿಗಾಗಿ ಎಲ್ಲ ಭಾಗಿದಾರ ಸಂಸ್ಥೆಗಳು, ಜನರಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ. ಪ್ರಸ್ತುತ 72 ಗ್ರಾಮಗಳ ವ್ಯಾಪ್ತಿಯಲ್ಲಿ ಇಂತಹ ಬೇರುಗಳ ಸೇತುವೆಗಳು100ಕ್ಕೂ ಹೆಚ್ಚಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.