ನವದೆಹಲಿ: ಸಹ ಜೀವನ ಸಂಗಾತಿಯನ್ನು ಕೊಂದು ಸಾಕ್ಷ್ಯ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹ್ರೌಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಆಫ್ತಾಬ್ ಅಮೀನ್ ಫೂನಾವಾಲ ವಿರುದ್ಧ ದೆಹಲಿ ಕೋರ್ಟ್ ಆರೋಪಗಳನ್ನು ಪಟ್ಟಿ ಮಾಡಿದೆ.
ಪೂನಾವಾಲ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷಿ ಕಣ್ಮರೆ) ಅಡಿಯಲ್ಲಿ ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನಿಶಾ ಖುರಾನಾ ಕಕ್ಕರ್ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ.
‘ಪ್ರಾಥಮಿಕವಾಗಿ ಸೆಕ್ಷನ್ 302ರಡಿ ಪ್ರಕರಣವನ್ನು ದಾಖಲಾಗಿಸಲಾಗಿದೆ’ಎಂದು ಎಎಸ್‌ಜೆ ಖುರಾನಾ ಹೇಳಿದರು.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪೂನಾವಾಲಾ, ಶ್ರದ್ಧಾ ಅವರ ಮೃತದೇಹವನ್ನು ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆಯುವ ಮೂಲಕ ಐಪಿಸಿ ಸೆಕ್ಷನ್ 201ರಡಿ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.
ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ನಾನು ತಪ್ಪಿತಸ್ಥನಲ್ಲ ಎಂದು ಪೂನಾವಾಲಾ ಹೇಳಿದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆ ಮತ್ತು ಸಾಕ್ಷ್ಯವನ್ನು ಸಲ್ಲಿಸಲು ಜೂನ್ 1ಕ್ಕೆ ಸಮಯ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.