ADVERTISEMENT

ಲಡಾಕ್‌: ನೀರ್ಗಲ್ಲು ಕರಗಿ ಮೂರು ಸರೋವರಗಳ ಸೃಷ್ಟಿ ಸಾಧ್ಯತೆ: ವಿಜ್ಞಾನಿಗಳ ಅಧ್ಯಯನ

ಡೆಹ್ರಾಡೂನ್‌ ಮೂಲದ ವಿಜ್ಞಾನಿಗಳಿಂದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 14:21 IST
Last Updated 29 ಜುಲೈ 2023, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಡಾಕ್‌ನ ಹಿಮಾಲಯದಲ್ಲಿರುವ ಪರ್ಕಾಚಿಕ್‌ ನೀರ್ಗಲ್ಲು ಅತಿವೇಗವಾಗಿ ಕರಗುತ್ತಿದ್ದು, ಇದರಿಂದ ಹಿಮಗಡ್ಡೆಗಳಿಂದ ಕೂಡಿರುವ ಮೂರು ಹೊಸ ಸರೋವರಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಇವು ಭಾರಿ ಹಿಮಪ್ರವಾಹಕ್ಕೂ ಕಾರಣವಾಗುವ ಸಂಭವ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಈ ಸರೋವರಗಳ ಆಳ 34ರಿಂದ 84 ಮೀಟರ್‌ ಇರಲಿದೆ ಎಂದು ಡೆಹ್ರಾಡೂನ್‌ನ ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯಾಲಜಿ ವಿಜ್ಞಾನಿಗಳು ತಿಳಿಸಿದ್ದಾರೆ. 

ಪರ್ಕಾಚಿಕ್ ನೀರ್ಗಲ್ಲು, ಸುರು ನದಿ ಕಣಿವೆಯಲ್ಲಿರುವ ಅತಿದೊಡ್ಡ ನೀರ್ಗಲ್ಲು ಆಗಿದೆ. ಇದು ಪಶ್ಚಿಮ ಹಿಮಾಲಯದ ಭಾಗವಾದ ಝನ್ಸ್‌ಕಾರ್ ಪರ್ವತ ಶ್ರೇಣಿಯಲ್ಲಿದ್ದು, ಲಡಾಕ್‌ನಲ್ಲಿದೆ.

ADVERTISEMENT

28 ವರ್ಷಗಳ ಹಿಂದಿನ ಅವಧಿಗೆ (1971ರಿಂದ 1999ರವರೆಗೆ) ಹೋಲಿಸಿದರೆ, 1999ರಿಂದ 2021ರ ನಡುವಿನ ಅವಧಿಯಲ್ಲಿ ಈ ನೀರ್ಗಲ್ಲಿನ ಕರಗುವಿಕೆ ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಉಪಗ್ರಹ ರವಾನಿಸಿದ ದತ್ತಾಂಶಗಳ ವಿಶ್ಲೇಷಣೆ ಆಧರಿಸಿ ಈ ವಿದ್ಯಮಾನ ಕುರಿತು ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ನೀರ್ಗಲ್ಲುಗಳು ವೇಗವಾಗಿ ಕರಗುವುದಕ್ಕೆ ಹವಾಮಾನ ಬದಲಾವಣೆ ಪ್ರಮುಖ ಕಾರಣ ಎಂದು ಇದೇ ಅಧ್ಯಯನ ಪ್ರತಿಪಾದಿಸಿದೆ.

ನೀರ್ಗಲ್ಲು ಕರಗಿದ ನಂತರ ಸರೋವರ ಸೃಷ್ಟಿಯಾಗಬಹುದಾದ ಮೂರು ಪ್ರದೇಶಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳ ವಿ‌ಸ್ತೀರ್ಣ 43 ರಿಂದ 270 ಹೆಕ್ಟೇರ್‌ನಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.