ಭೋಪಾಲ್: ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಮಧ್ಯಪ್ರದೇಶ ಬಿಜೆಪಿ ಶಾಸಕ ರಮೇಶ್ ಮೆಂದೋಲಾ ಅವರು ಶನಿವಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ‘ಕಾಂವಡ್ ಯಾತ್ರೆ ಮಾರ್ಗ’ದಲ್ಲಿನ ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂದು ಆದೇಶಿಸಿದ್ದು ವಿವಾದಾತ್ಮಕ ಸ್ವರೂಪ ಪಡೆದಿದೆ. ಈ ನಡುವೆಯೇ ಮೆಂದೋಲಾ ಅವರು ಈ ಕೋರಿಕೆ ಸಲ್ಲಿಸಿದ್ದಾರೆ.
‘ವ್ಯಕ್ತಿಯ ಹೆಸರು ಅವರ ಗುರುತು. ಅವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಅವರ ಹೆಸರನ್ನು ಕೇಳುವುದು ಗ್ರಾಹಕರ ಹಕ್ಕು. ರಾಜ್ಯದಲ್ಲಿ ಈ ಸಂಬಂಧ ಕಾನೂನು ಜಾರಿ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
‘ಕಾಂವಡ್ ಯಾತ್ರೆ ಮಾರ್ಗ’ದಲ್ಲಿ ಇರುವ ತಿಂಡಿ–ತಿನಿಸುಗಳ ಮಳಿಗೆಗಳ ಮುಂದೆ ಮಾಲೀಕರು ತಮ್ಮ ಹೆಸರನ್ನು ಉಲ್ಲೇಖಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಇದು ವಿಕಸಿತ ಭಾರತಕ್ಕೆ ಮಾರ್ಗವೇ? ಹಗೆತನದ ಅಜೆಂಡಾ ದೇಶವನ್ನು ಒಡೆಯುತ್ತದಷ್ಟೆ!ಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ಕಾಂವಡ್ ಯಾತ್ರೆ ಮಾರ್ಗದಲ್ಲಿರುವ ಹಣ್ಣಿನ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಮಳಿಗೆ ಮುಂದೆ ಹಾಕಬೇಕು ಎಂಬ ಸರ್ಕಾರದ ಆದೇಶದಲ್ಲಿ ತಪ್ಪೇನೂ ಇಲ್ಲ. ಇದರಿಂದ ಗ್ರಾಹಕರು ತಮ್ಮ ಇಷ್ಟದ ಅಂಗಡಿಯನ್ನು ಸುಲಭವಾಗಿ ಹುಡುಕಬಹುದುಜಿತನ್ ರಾಮ್ ಮಾಂಝಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.