ADVERTISEMENT

ಗುಜರಾತ್‌ನಲ್ಲಿ ₹180 ಕೋಟಿ ಮೌಲ್ಯದ ಮೆಫೆಡ್ರೋನ್ ಡ್ರಗ್ಸ್ ವಶ, ಮೂವರ ಬಂಧನ

ಪಿಟಿಐ
Published 8 ನವೆಂಬರ್ 2023, 4:26 IST
Last Updated 8 ನವೆಂಬರ್ 2023, 4:26 IST
Venugopala K.
   Venugopala K.

ವಾಪಿ (ಗುಜರಾತ್): ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು(ಡಿಆರ್‌ಐ) ₹180 ಕೋಟಿ ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.

ವಾಪಿಯ ಗುಜರಾತ್ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ(ಜಿಐಡಿಸಿ) ಪ್ರೈಮ್ ಪಾಲಿಮರ್ ಇಂಡಸ್ಟ್ರೀಸ್‌ನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎಂಬ ಸುಳಿವು ಆಧರಿಸಿ, ಡಿಆರ್‌ಐ ದಾಳಿ ನಡೆಸಿ 121.75 ಕೆ.ಜಿ ದ್ರವರೂಪದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ಮಾಲೀಕ ರಾಜು ಸಿಂಗ್, ಅಕೌಂಟೆಂಟ್ ಕೆಯೂರ್ ಪಟೇಲ್ ಮತ್ತು ಕೆಲಸಗಾರ ಕುಂದನ್ ಯಾದವ್ ಅವರನ್ನು ಬಂಧಿಸಲಾಗಿದೆ.

ADVERTISEMENT

ವಾಪಿಯಲ್ಲಿರುವ ಸಿಂಗ್ ಅವರ ಮನೆಯಿಂದ ಡಿಆರ್‌ಐ ₹18 ಲಕ್ಷ ಹಣವನ್ನೂ ವಶಪಡಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂವರನ್ನು ನವೆಂಬರ್ 10ರವರೆಗೆ ಡಿಆರ್‌ಐ ವಶಕ್ಕೆ ಒಪ್ಪಿಸಿದೆ.

ಎರಡು ವಾರಗಳ ಹಿಂದೆ ಡಿಆರ್‌ಐ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮೆಫೆಡ್ರೋನ್ ತಯಾರಿಕಾ ಘಟಕವನ್ನು ಧ್ವಂಸಗೊಳಿಸಿತ್ತು.

ಕಾರ್ಯಾಚರಣೆಯಲ್ಲಿ ₹400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೆಫೆಡ್ರೋನ್ ತಯಾರಿಕೆಯಲ್ಲಿ ತೊಡಗಿದ್ದ ಎರಡು ಲ್ಯಾಬ್‌ಗಳನ್ನು ಪತ್ತೆಹಚ್ಚಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.