ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಸಚಿವ ಎಂ.ಜೆ. ಅಕ್ಬರ್ ಅಪರಾಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಕೀಲ ಕರಣ್‌ಜವಾಲ ಅವರ ಮೂಲಕ ಇಲ್ಲಿನ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.
ಆರೋಪದ ಬಗ್ಗೆ ಪ್ರತಿಕ್ರಿಯೆ ನಿಡಿದ ಮರುದಿನವೇ ಸಚಿವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ನೈಜೀರಿಯಾ ಪ್ರವಾಸದಿಂದ ವಾಪಸಾಗಿದ್ದ ಅವರು ಭಾನುವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿ,ತಮ್ಮ ವಿರುದ್ಧದ ಆರೋಪದ ಸುಳ್ಳು ಎಂದು ಹೇಳಿದ್ದರು.
ಪ್ರಿಯಾ ರಮಣಿ ಸೇರಿದಂತೆ12 ಪತ್ರಕರ್ತೆಯರು #MeToo ಅಭಿಯಾನದ ಮೂಲಕ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಕ್ಬರ್ ಜತೆ ಕೆಲಸ ಮಾಡುತ್ತಿದ್ದಾಗ ಅಥವಾ ಕೆಲಸದ ಸಂದರ್ಶನಕ್ಕೆ ಹಾಜರಾಗಿದ್ದಾಗ ಅವರು ಅಸಭ್ಯವಾಗಿ ವರ್ತಿಸಿದ್ದರು ಎಂದು ಈ ಪತ್ರಕರ್ತೆಯರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಪ್ರಿಯಾ ರಮಣಿ ಅವರು ಇದೇ 8ರಂದು ಟ್ವೀಟ್ ಮೂಲಕ ಮೊದಲ ಬಾರಿ ಆರೋಪ ಮಾಡಿದ್ದರು.ಬಳಿಕ, ಪ್ರೇರಣಾ ಸಿಂಗ್ ಬಿಂದ್ರಾ, ಘಜಾಲಾ ವಹಾಬ್, ಶುತಾಪಾ ಪಾಲ್, ಅಂಜು ಭಾರ್ತಿ, ಸುಪರ್ಣಾ ಶರ್ಮಾ, ಶುಮಾ ರಾಹಾ, ಮಾಲಿನಿ ಭೂಪ್ತಾ, ಕನಿಕಾ ಗೆಹ್ಲೋಟ್, ಕಾದಂಬರಿ ಎಂ. ವಾಡೆ, ಮಜಿಲಿ ಡೆ ಪ್ಯು ಕಾಂಪ್ ಮತ್ತು ರೂಥ್ ಡೇವಿಡ್ ಅವರು ಅಕ್ಬರ್ ವಿರುದ್ಧ ಆರೋಪ ಮಾಡಿದ್ದರು.
ಇದನ್ನೂ ಓದಿ:‘ಮೀ–ಟೂ’ ಚಾಟಿಗೆ ಅಕ್ಬರ್ ತಿರುಗೇಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.