ನವದೆಹಲಿ: ಭಾರತದಲ್ಲಿ #MeToo ಚಳವಳಿ ತಪ್ಪಾದ ರೀತಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.ಹತ್ತು ವರ್ಷದ ಹಿಂದೆ ನಡೆದ ಲೈಂಗಿಕ ಕಿರುಕುಳವನ್ನು ಉಲ್ಲೇಖಿಸಿ ಮಹಿಳೆಯರು ಆರೋಪ ಮಾಡುತ್ತಿರುವ ಬಗ್ಗೆ ಉದಿತ್ ರಾಜ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇದೇ ಮೊದಲ ಬಾರಿ ಬಿಜೆಪಿ ಪಕ್ಷದ ಪ್ರತಿನಿಧಿಯೊಬ್ಬರು ಮಿಟೂ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಚಳವಳಿಗೆ ಬೆಂಬಲ ನೀಡುತ್ತಿದ್ದು, ಈ ಆರೋಪಗಳನ್ನು ದೃಢೀಕರಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
#MeToo ಚಳವಳಿ ಅಗತ್ಯವಿದೆ. ಆದರೆ ಯಾವುದೇ ವ್ಯಕ್ತಿ ಮೇಲೆ 10 ವರ್ಷದ ನಂತರ ಲೈಂಗಿಕ ಕಿರುಕುಳ ಆರೋಪ ಹೊರಿಸುತ್ತಿರುವುದರ ಅರ್ಥವೇನು? ಇಷ್ಟು ವರ್ಷಗಳಾದ ನಂತರ ಈ ಆರೋಪದ ಸತ್ಯಾಸತ್ಯತೆ ಅರಿಯುವುದಾದರೂ ಹೇಗೆ? ಯಾವುದಾದರೂ ಒಬ್ಬ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಹೊರಿಸಿದರೆ ಅವರ ವ್ಯಕ್ತಿತ್ವದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ? ಲಿವ್ ಇನ್ ರಿಲೇಶನ್‍ಶಿಪ್ ನಲ್ಲಿರುವ ಮಹಿಳೆಯೊಬ್ಬಳು ಆಕೆಯ ಸಂಗಾತಿ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಆತನನ್ನು ಜೈಲಿಗಟ್ಟಬಹುದು.ಇಂಥಾ ಘಟನೆಗಳು ದಿನಾ ನಡೆಯುತ್ತಿವೆ. ಇದೊಂಥರಾ ಬ್ಲಾಕ್ ಮೇಲ್ ಮಾಡಿದಂತೆ ಎಂದಿದ್ದಾರೆ ರಾಜ್.
ಪುರುಷರ ವಿರುದ್ಧ ಆರೋಪ ಮಾಡಿ ಮಹಿಳೆಯರು ₹2-4 ಲಕ್ಷ ವಸೂಲಿ ಮಾಡುತ್ತಾರೆ. ಆಮೇಲೆ ಬೇರೊಬ್ಬನ ಬಳಿ ಹೋಗುತ್ತಾರೆ. ಇದೆಲ್ಲ ಮಾನವ ಸಹಜ. ಆದರೆ ಮಹಿಳೆಯರು ಎಲ್ಲರೂ ಸರಿಯಾಗಿದ್ದಾರಾ? ಇದರಿಂದಾಗಿ ಗಂಡಸರ ಜೀವನವೂ ದುಸ್ತರವಾಗಿಗೆ ಎಂದು ರಾಜ್ ಪ್ರತಿಕ್ರಿಯೆಯನ್ನು ಎಎನ್ಐ ಟ್ವೀಟ್ ಮಾಡಿದೆ.
ಈ ಚಳವಳಿಯಿಂದಾಗಿಮಹಿಳೆಯರನ್ನು ಒಂಟಿಯಾಗಿ ಭೇಟಿಯಾಗಲು ಗಂಡಸರು ಹಿಂಜರಿಯುತ್ತಿದ್ದಾರೆ ಎಂದು ರಾಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.