ADVERTISEMENT

ವಿದೇಶಿ ದೇಣಿಗೆ ಸ್ವೀಕಾರ: 'ಮಿಷನರೀಸ್‌ ಆಫ್‌ ಚಾರಿಟಿ' ಮೇಲಿನ ನಿರ್ಬಂಧ ರದ್ದು

ಪಿಟಿಐ
Published 8 ಜನವರಿ 2022, 11:28 IST
Last Updated 8 ಜನವರಿ 2022, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋಲ್ಕತ್ತ ಮೂಲದ 'ಮಿಷನರೀಸ್‌ ಆಫ್‌ ಚಾರಿಟಿ'ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕಾರ ಸಂಬಂಧ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಗೃಹ ಸಚಿವಾಲಯವು ಕೈಬಿಟ್ಟಿದೆ.

ಈ ನಿರ್ಧಾರದ ಹಿನ್ನೆಲೆಯಲ್ಲಿ ಈ ಸೇವಾಸಂಸ್ಥೆಯು ವಿದೇಶಿ ದೇಣಿಗೆ ಪಡೆಯಬಹುದು. ಅಲ್ಲದೆ ಬ್ಯಾಂಕ್‌ ಖಾತೆಗಳಲ್ಲಿ ಇರುವ ಹಣವನ್ನು ವೆಚ್ಚ ಮಾಡಬಹುದಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ಅನ್ವಯ ಈ ಸಂಸ್ಥೆಗೆ ನೀಡಿದ್ದ ಲೈಸೆನ್ಸ್‌ ಅನ್ನು ಈ ಮೊದಲು ಸಚಿವಾಲಯ ರದ್ದುಪಡಿಸಿತ್ತು.

ADVERTISEMENT

ಕ್ಯಾಥೊಲಿಕ್‌ ಧಾರ್ಮಿಕ ಸಂಸ್ಥೆಯಾದ ‘ಮಿಷನರೀಸ್‌ ಆಫ್‌ ಚಾರಿಟಿ (ಎಂಒಸಿ)‘ 1950ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮದರ್‌ ತೆರೇಸಾ ಅವರು ಕಡುಬಡವರಿಗೆ ನೆರವಾಗಲು ಇದನ್ನು ಸ್ಥಾಪಿಸಿದ್ದರು.

ಧಾರ್ಮಿಕ ಸಂಸ್ಥೆಯು ಈ ಕುರಿತು ಪ್ರತಿಕ್ರಿಯಿಸಿಲ್ಲ. ಆದರೆ, ಅಧಿಕಾರಿಯೊಬ್ಬರು ಸಚಿವಾಲಯ ನಿರ್ಬಂಧ ಕೈಬಿಟ್ಟಿರುವುದನ್ನು ದೃಢಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.