ಮುಂಬೈ: ಮಹಾರಾಷ್ಟ್ರದ ಔರಂಗಬಾದ್‌ನ ನಗರದ ರೈಲು ಹಳಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16ಮಂದಿ ಸಾವಿಗೀಡಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
16 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದು, ದಕ್ಷಿಣ ಸೆಂಟ್ರಲ್ ರೈಲ್ವೆ 15ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಾಗಿಸಿತ್ತು. ಅಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಮೋಕ್ಷಿದಾ ಪಾಟೀಲ್ ಹೇಳಿದ್ದಾರೆ.
ಇದು ದುರದೃಷ್ಟಕರ. ರೈಲ್ವೆ ಹಳಿಯಿಂದ ಸ್ವಲ್ಪ ದೂರ ಕುಳಿತುಕೊಂಡಿದ್ದ ನಾಲ್ವರು ಬದುಕಿದ್ದಾರೆ.ಜಲ್ನಾದಿಂದ ಬಂದಿದ್ದ ವಲಸೆ ಕಾರ್ಮಿಕರು ಮನೆಗೆ ಹೋಗಲಿರುವ ರೈಲು ಹತ್ತಲು ಭುಸ್ವಾಲ್ ಕಡೆಗೆ ಹೋಗುತ್ತಿದ್ದರು, ಅವರು ನಿರ್ದಿಷ್ಟ ಯಾವ ಸ್ಥಳಕ್ಕೆ ಹೋಗುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಜತೆಗಿದ್ದವರಲ್ಲಿ ನಾವು ಮಾತನಾಡುತ್ತಿದ್ದು, ಅವರಿಗೆ ಆಪ್ತ ಸಹಾಯ ನೀಡುತ್ತಿದ್ದೇವೆ ಎಂದು ಮೋಕ್ಷಿದಾ ಹೇಳಿದ್ದಾರೆ.
ರೈಲ್ವೆ ಸಚಿವಾಲಯದ ಪ್ರಕಾರ, ಮುಂಜಾನೆ ಕೆಲವು ಕಾರ್ಮಿಕರು ರೈಲು ಹಳಿಯಲ್ಲಿರುವುದನ್ನು ಗಮನಿಸಿದ ಲೋಕೊಪೈಲೆಟ್‌ಗಳು ರೈಲನ್ನು ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬದನ್‌ಪುರ್ ಮತ್ತು ಕರ್ನಾಡ್ ರೈಲು ನಿಲ್ದಾಣಗಳ ನಡುವೆ ಪರ್ಭನಿ ಮನ್ಮಾದ್ ವಿಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗಾಯಗೊಂಡವರನ್ನು ಔರಂಗಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ತನಿಖೆ ನಡೆಸಲು ರೈಲ್ವೆ ಸಚಿವ ಪೀಯುಷ್ ಗೋಯಲ್ ಆದೇಶಿಸಿದ್ದಾರೆ.
ಈ ದುರ್ಘಟನೆಗೆ ಉಪ ರಾಷ್ಟ್ರಪತಿ ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.