ನವದೆಹಲಿ: ನರೇಂದ್ರ ಮೋದಿ ಜತೆ 24 ಮಂದಿ ಸಂಪುಟ ದರ್ಜೆ ಸಚಿವರು,9 ಮಂದಿ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗೂ 24 ಮಂದಿಗೆ ರಾಜ್ಯ ಸಚಿವರಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಪ್ರಮಾಣವಚನ ಬೋಧಿಸಿದರು.ಈ ವೇಳೆ ಕೆಲವು ಸಚಿವರು ಪ್ರಮಾಣವಚನದ ಆರಂಭದಲ್ಲಿ ನಾನು ಎಂಬ ಪದವನ್ನು ಹೇಳಲು ಮರೆತಿದ್ದಾರೆ.
ಮನ್‌ಸುಖ್ ಲಾಲ್ ಮಾಂಡವ್ಯ ( ರಾಜ್ಯ ಸಚಿವರು, ಸ್ವತಂತ್ರ ನಿರ್ವಹಣೆ) ಮತ್ತು ಫಗ್ಗನ್ ಸಿಂಗ್ ಕುಲಸ್ತೆ (ರಾಜ್ಯ ಸಚಿವರು) ಎರಡನೇ ವಾಕ್ಯದಲ್ಲಿ ನಾನು ಎಂದು ಹೇಳಲು ಮರೆತಿದ್ದಾರೆ.ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸುವಾಗ ಮೊದಲ ಬಾರಿ ನಾನು ಎಂದು ಹೇಳಿಕೊಡುತ್ತಾರೆ. ಸಚಿವರು ಅದನ್ನು ಪುನರಾವರ್ತಿಸಬೇಕು.ಮೊದಲಭಾಗದಲ್ಲಿ ತಾನು ನಿರ್ವಹಿಸುವ ಕೆಲಸದ ಬಗ್ಗೆ ಪ್ರಮಾಣ ವಚನ ಮಾಡಿಎರಡನೇ ಸಾಲಿನಲ್ಲಿ ಕೆಲಸದ ಬದ್ಧತೆ ಬಗ್ಗೆ ಪ್ರಮಾಣ ವಚನ ಮಾಡಬೇಕಾಗುತ್ತದೆ. ಹೀಗೆ ಹೇಳುವಾಗ ರಾಷ್ಟ್ರಪತಿಗಳು ನಾನು ಎಂಬುದನ್ನು ಹೇಳುವುದಿಲ್ಲ,.ಸಚಿವರೇ ನಾನು ಎಂದು ಹೇಳಿ ಪ್ರಮಾಣ ವಚನ ಮುಂದುವರಿಸಬೇಕಾಗುತ್ತದೆ. ಆ ರೀತಿ ಹೇಳುವಾಗ ಈ ಇಬ್ಬರು ಸಚಿವರು ನಾನು ಎಂಬುದನ್ನು ಹೇಳಲು ಮರೆತಿದ್ದಾರೆ.
ಪ್ರಮಾಣವಚನ ಸ್ವೀಕರಿಸುವಾಗ ಮಹಾರಾಷ್ಟ್ರದ ರಾವ್‌ಸಾಹೇಬ್ ದನ್ವೆ ತಡವರಿಸಿದ್ದು, ಪ್ರಮಾಣ ವಚನ ಸ್ವೀಕರಿಸಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.ನಿತ್ಯಾನಂದ ರೈ, ರತನ್ ಲಾಲ್ ಕಟಾರಿಯಾ ಕೂಡಾ ತಡವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.