ADVERTISEMENT

ಮಾನವ ಕಳ್ಳಸಾಗಾಣಿಕೆ ತಡೆಯಲು ಕಾರ್ಯಾಗಾರ: ಗೃಹ ಸಚಿವಾಲಯದ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 14:30 IST
Last Updated 16 ಆಗಸ್ಟ್ 2022, 14:30 IST
   

ನವದೆಹಲಿ: ಪೊಲೀಸ್‌ ಇಲಾಖೆ, ನ್ಯಾಯಾಂಗ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳನ್ನುಮಾನವ ಕಳ್ಳಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಜ್ಜುಗೊಳಿಸಲು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಗೆ ಪತ್ರ ಬರೆದಿದೆ. ಇಂಥ ಕಾರ್ಯಕ್ರಮಗಳ ಆಯೋಜನೆಗಾಗಿ ₹2 ಲಕ್ಷ ಆರ್ಥಿಕ ನೆರವು ನೀಡುವುದಾಗಿಯೂ ಸಚಿವಾಲಯ ತಿಳಿಸಿದೆ.

ಮಾನವ ಕಳ್ಳಸಾಗಾಣಿಕೆ ನಿಗ್ರಹಕ್ಕೆ ಸಂಬಂಧಪಟ್ಟ ಇತ್ತೀಚಿನ ಕಾನೂನುಗಳ ಕುರಿತು ಪೊಲೀಸರು, ಕಾರ್ಮಿಕರು, ಸಾಮಾಜಿಕ ನ್ಯಾಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಹಾಗೂ ನ್ಯಾಯಾಂಗದ ಅಧಿಕಾರಿಗಳ ಅರಿವನ್ನು ಹೆಚ್ಚಿಸಬೇಕು. ಹಾಗೆಯೇ, ಸಂತ್ರಸ್ತರಿಗೆಕಳ್ಳಸಾಗಾಣೆಕಾರರು ಆಮಿಷ ಒಡ್ಡುವ ವಿಧಾನಗಳ ಕುರಿತು ಅಧಿಕಾರಿಗಳನ್ನು ಸೂಕ್ಷ್ಮಗ್ರಾಹಿಗಳಾಗಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಸಮ್ಮೇಳನಗಳು ಮತ್ತು ನ್ಯಾಯಿಕ ಕಾರ್ಯಾಗಾರಗಳನ್ನು ನಡೆಸುವುದು ಅಗತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ.

ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ ಪ್ರಕಾರ 2020ರ ವೇಳೆಗೆ ಮಾನವ ಕಳ್ಳಸಾಗಾಣೆ ಮೊಕದ್ದಮೆ ಅಡಿ ಅಪರಾಧ ಸಾಬೀತಿನ ಪ್ರಮಾಣ ಕೇವಲ ಶೇ 10.6ರಷ್ಟು ಮಾತ್ರ. 49 ಮೊಕದ್ದಮೆಗಳಲ್ಲಿ 101 ಜನರ ಅಪರಾಧ ಸಾಬೀತಾಗಿದೆ.414 ಮೊಕದ್ದಮೆಗಳು ಖುಲಾಸೆ ಆಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.