ADVERTISEMENT

ದೆಹಲಿ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಪಿಟಿಐ
Published 23 ಆಗಸ್ಟ್ 2023, 12:35 IST
Last Updated 23 ಆಗಸ್ಟ್ 2023, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸಲು ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರೇಮೋದಯ್‌ ಖಾಖಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಇಲ್ಲಿನ ಕೋರ್ಟ್‌ ಮತ್ತೆ 14 ದಿನ ವಿಸ್ತರಿಸಿದೆ.

ಆರೋಪಿ ಪತ್ನಿ ಸೀಮಾ ರಾಣಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನೂ 14 ದಿನ ವಿಸ್ತರಿಸಿ ಕೋರ್ಟ್‌ ಆದೇಶಿಸಿದೆ.

 ಬುಧವಾರ ಇಬ್ಬರನ್ನೂ ಹೆಚ್ಚುವರಿ ಸೆಷನ್ಸ್‌ ಜಡ್ಜ್‌ (ಪೋಕ್ಸೊ) ರಿಚಾ ಪರಿಹಾರ್‌ ಅವರ ಎದುರು ಹಾಜರುಪಡಿಸಲಾಗಿತ್ತು.

ADVERTISEMENT

2020ರ ಅಕ್ಟೋಬರ್‌ 1ರಂದು ಬಾಲಕಿ ತಂದೆ (ಆರೋಪಿಯ ಸ್ನೇಹಿತ‌) ಮೃತಪಟ್ಟಿದ್ದರು. ನಂತರ ಆಕೆ, ಆರೋಪಿಯ ಕುಟುಂಬದೊಂದಿಗೆ ಅವರ ನಿವಾಸದಲ್ಲಿ ವಾಸವಿದ್ದಳು. ನವೆಂಬರ್‌ 2020ರಿಂದ ಜನವರಿ 2021ರ ಅವಧಿಯಲ್ಲಿ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಖಾಖಾ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಗೆ ಗರ್ಭಪಾತದ ಔಷಧ ನೀಡಿದ ಆರೋಪದ ಮೇಲೆ  ಸೀಮಾ ರಾಣಿ ವಿರುದ್ಧ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.