ನವದೆಹಲಿ: ದೂರ ವ್ಯಾಪ್ತಿಯ ಗುರಿಯನ್ನು ಶೇ 100ರಷ್ಟು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಮಿರಾಜ್ 2000 ಯುದ್ಧವಿಮಾನಕ್ಕೆ ಇದೆ. ಜೊತೆಗೆ ಲೇಸರ್ ಗೈಡೆಡ್ ಸೇರಿದಂತೆ ಬಾಂಬ್ ಹಾಗೂ ಕ್ಷಿಪಣಿಗಳನ್ನು ಶತ್ರುನೆಲೆದ ಮೇಲೆ ಕರಾರುವಕ್ಕಾಗಿ ಎಸೆಯುವ ಗುಣವೇ, ಜೈಷ್ ಉಗ್ರರ ನೆಲೆ ಮೇಲೆ ದಾಳಿಗೆ ಮಿರಾಜ್ ವಿಮಾನವನ್ನು ಆಯ್ಕೆ ಮಾಡಲು ಇರುವ ಮುಖ್ಯ ಕಾರಣ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಫೇಲ್ ಯುದ್ಧವಿಮಾನ ತಯಾರಕ ಸಂಸ್ಥೆ ಫ್ರಾನ್ಸ್‌ನ ಡಾಸೊ ನಿರ್ಮಿಸಿರುವ ಮಿರಾಜ್ 2000ನ ಮೂರು ತುಕಡಿಗಳು ಭಾರತದ ಬಳಿ ಇವೆ. ಇವು ಗ್ವಾಲಿಯರ್ ವಾಯುನೆಲೆಯಲ್ಲಿವೆ. ಆದರೆ ಗ್ವಾಲಿಯರ್‌ನಿಂದ ಇವು ಹಾರಾಟ ನಡೆಸಿದವೇ ಅಥವಾ ಇತರೆ ನೆಲೆಯಿಂದ ಕಾರ್ಯಾಚರಣೆ ಆರಂಭಿಸಿದವೇ ಎಂಬುದು ದೃಢಪಟ್ಟಿಲ್ಲ.
30 ವರ್ಷಗಳ ಹಿಂದೆಯೇ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಮಿರಾಜ್ ಅನ್ನು ₹20 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರಫೇಲ್ ಯುದ್ಧವಿಮಾನವೂ ಬತ್ತಳಿಕೆಗೆ ಸೇರಿದ ಬಳಿಕ ವಾಯುಪಡೆ ಸಾಮರ್ಥ್ಯ ಇನ್ನಷ್ಟು ವೃದ್ಧಿಸಲಿದೆ. ₹58 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳ ಒಪ್ಪಂದ ಖರೀದಿ ಪ್ರಕ್ರಿಯೆ ನಡೆದಿದ್ದು, ಮೊದಲ ವಿಮಾನವು ಇದೇ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.