ನವದೆಹಲಿ: ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ‘ದಾರಿ ತಪ್ಪಿಸುವ, ದ್ರೋಹ ಮಾಡುವ, ವಂಚಿಸುವ...’ ಪ್ರಧಾನಿ ಅವರೇ, ಭಾರತದ ನಿರುದ್ಯೋಗಿ ಯುವಜನರು ಈ ಅಸಂಸದೀಯ ಪದಗಳನ್ನು ನಿಮ್ಮ ಸುಳ್ಳು ಮಾತಿಗೆ ಬಳಸಬಹುದೇ?’ ಎಂದು ಪ್ರಶ್ನಿಸಿದ್ದಾರೆ.
2017–18ರಿಂದ 2021–22ರ ಐದು ವರ್ಷಗಳ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣವು ದ್ವಿಗುಣಗೊಂಡಿರುವ ಕುರಿತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ದತ್ತಾಂಶಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘ಪ್ರತಿವರ್ಷ ಸೃಷ್ಟಿಸಿದ ಎರಡು ಕೋಟಿ ಉದ್ಯೋಗಗಳು ಎಲ್ಲಿ ಪ್ರಧಾನಿಯವರೇ?’ ಎಂದೂ ಅವರು ವ್ಯಂಗ್ಯವಾಗಿ ಕೇಳಿದ್ದಾರೆ.
ಲೋಕಸಭೆಯ ಕಾರ್ಯಾಲಯವು ‘ಅಸಂಸದೀಯ ಪದಗಳಿಗೆ’ ಸಂಬಂಧಿಸಿದಂತೆ ಹೊಸ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದು, ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಾಹುಲ್ ಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.