ADVERTISEMENT

ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ನೀಟ್ ಆಕಾಂಕ್ಷಿ ಚೆನ್ನೈನಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:15 IST
Last Updated 17 ಜೂನ್ 2024, 16:15 IST
   

ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ಗೆ ಹೆಸರಾದ ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ನೀಟ್ ಆಕಾಂಕ್ಷಿ ಬಾಲಕಿಯೊಬ್ಬಳು ಚೆನ್ನೈನಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.    

15 ವರ್ಷದ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಆಕೆಗೆ ಕೌನ್ಸಿಲಿಂಗ್ ನಡೆಸಲಾಯಿತು. ನಂತರ ಪುನರ್‌ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು ಎಂದು ಕೋಟಾ ನಗರ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಹೇಳಿದ್ದಾರೆ. 

ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ ನೀಟ್‌ ತರಬೇತಿ ಪಡೆಯುತ್ತಿದ್ದ ಬಾಲಕಿಯು, ಜೂನ್ 10ರಂದು ತರಗತಿಗೆ ತೆರಳಲು ಹಾಸ್ಟೆಲ್ ಬಿಟ್ಟಿದ್ದಳು. ನಂತರ ಹಾಸ್ಟೆಲ್‌ಗೆ ವಾಪಸ್ಸಾಗಿರಲಿಲ್ಲ. ಆಕೆ ಸೂರತ್ ಮತ್ತು ಮುಂಬೈ ಮೂಲಕ ಕೋಟಾದಿಂದ ಚೆನ್ನೈಗೆ ಪ್ರಯಾಣಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದಕ್ಕೆ ಕಾರಣವೇನು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.