ADVERTISEMENT

ಮಿಜೋರಾಂ: ₹32 ಕೋಟಿ ಮೌಲ್ಯದ ಮಾದಕ ಮಾತ್ರೆಗಳು ವಶಕ್ಕೆ

ಪಿಟಿಐ
Published 13 ಜುಲೈ 2024, 6:45 IST
Last Updated 13 ಜುಲೈ 2024, 6:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಐಜ್ವಾಲ್: ಮಾದಕ ವಸ್ತು ಜಾಲವೊಂದನ್ನು ಮಿಜೋರಾಂ ಪೊಲೀಸರು ಭೇದಿಸಿದ್ದು, ₹32 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 10 ಲಕ್ಷಕ್ಕೂ ಅಧಿಕ ಮೆತಾಂಫೆಟೆಮಿನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಾತ್ರೆಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಖೌಜ್ವಾಲ್ ಹಾಗೂ ಚಾಂಪ್‌ಹಾಯ್ ಪೊಲೀಸರು ಖೌಜ್ವಾಲ್‌ನ ಲಂಗ್ವಾರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಈ ಪ್ರಮಾಣದ ಮಾದಕ ಮಾತ್ರೆಗಳು ಪತ್ತೆಯಾಗಿವೆ.

ADVERTISEMENT

ಮಾದಕ ಮಾತ್ರೆಗಳಿದ್ದ ವಾಹನ ಚಾಂಪ್‌ಹಾಹ್‌ನಿಂದ ಐಜ್ವಾಲ್ ಕಡೆಗೆ ತೆರಳುತ್ತಿತ್ತು.

ತಪಾಸಣೆ ವೇಳೆ 10.07 ಲಕ್ಷ ಮಾತ್ರೆಗಳಿದ್ದ 106 ಪೊಟ್ಟಣಗಳು ಪತ್ತೆಯಾಗಿವೆ. ಇವುಗಳು 115.55 ಕೆ.ಜಿ ತೂಗುತ್ತಿದ್ದವು. ಚಂಪೈ ವೆಂಗ್‌ಸಾಂಗ್‌ನ ನಿವಾಸಿ ಲಾಲ್ರಿಂಟ್ಲುವಾಂಗಾ ಎಂಬ ಡ್ರಗ್ ಪೆಡ್ಲರ್‌ನಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಮೆತಾಂಫೆಟೆಮಿನ್ ಶಕ್ತಿಯುತ, ಹೆಚ್ಚು ವ್ಯಸನಕಾರಿ ಉತ್ತೇಜಕವಾಗಿದ್ದು ಇದನ್ನು ಮಾದಕ ವಸ್ತುಗಳಲ್ಲಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.